Skip to main content

Posts

Showing posts from November, 2013

ವೇದೋಕ್ತ ಉಡುಗೆ ತೊಡಿಗೆ ಅಲಂಕಾರ ವೇಷ ಭೂಷಣ ಭಾಗ್ಯಗಳು

ಬೇಲಿಯೇ ಎದ್ದು ಹೊಲ ಮೇಯ್ದರೆ? ಇಂದಿನ ವೇದಶಾಸ್ತ್ರಜ್ಞರೂ, ವಿದ್ವಾಂಸರೂ, ಪ್ರಕಾಂಡ ಪಂಡಿತರು, ಜ್ಯೋತಿರ್ವಿದ್ವಾನ್ ಎಂದೆಲ್ಲ ಮಾಧ್ಯಮಗಳಿಂದ ಬಿರುದಾವಳಿ ಪಡೆದ ವಿಧ್ವಂಸಕರು ಉನ್ಮಾದದಿಂದ ಭಾರತೀಯ ಸಂಸ್ಕೃತಿಯನ್ನೇ ತಿರುಚುವ ಹುನ್ನಾರ ಗೈದಿದ್ದಾರೆ. ಏನಾಯ್ತು ಎಂದಿರಾ? ಮಾಂಗಲ್ಯಧಾರಣೆಯು ವೇದೋಕ್ತವಲ್ಲವಂತೆ ಅಂತ ಗಂಟೆಗಟ್ಟಲೆ ಟಿವಿಯಲ್ಲಿ ಚರ್ಚೆ. ಓತಿಕೇತನಿಗೊಂದು ಬೇಲಿ ಸಾಕ್ಷಿ ಎಂಬಂತೆ ಇಲ್ಲಸಲ್ಲದ ವಿತಂಡವಾದದ ಸರಣಿಯನ್ನೇ ಮಂಡಿಸುತ್ತಾರೆ. ಒಂದಂತು ನಿಜ, ಆ ರೀತಿ ಕುತಂತ್ರದಿಂದ ತಾಳಿ ಕಟ್ಟುವುದೇ ನಿಷೇಧ ಎಂಬಂತಹಾ ವಾಕ್ಯಗಳಿಂದ ಜನರನ್ನು ಭ್ರಾಂತರಾಗುವಂತೆ ಮಾಡಿದವರ ವಂಶದಲ್ಲಿ ಮುಂದೆ ಮಾಂಗಲ್ಯ ಭಾಗ್ಯವೇ ನಾಶವಾಗಿ ನಿರ್ವಂಶವಾಗುವುದು ಎಂಬುದಕ್ಕೆ ಕರ್ಮಸಿದ್ಧಾಂತ ಆಧಾರ ಹಾಗೂ ಪ್ರಾತ್ಯಕ್ಷತೆ ಇದೆ.
ಮೊತ್ತ ಮೊದಲಿಗೆ ತಿಳಿಯಬೇಕಾದ ವಿಚಾರವೆಂದರೆ ವೇದಗಳು ತಾವು ತಿಳಿದಂತೆ ಸಂಸ್ಕೃತದಲ್ಲಿಲ್ಲ! ಅದು ವೇದಭಾಷೆಯಾದ ಬ್ರಾಹ್ಮಿಯಲ್ಲಿದೆ. ಸಂಸ್ಕೃತದ ಹಲವು ಪದಪುಂಜಗಳು, ವ್ಯಾಕರಣ ನಿಯಮಗಳು ಬ್ರಾಹ್ಮಿಗೆ ಸಮೀಪವಿದೆ. ಆದರೆ ಸಂಸ್ಕೃತದಿಂದ ವೇದಾರ್ಥ ಮಾಡಿದರೆ ಅಪಾರ್ಥವೇ ಆಗುವುದು ಶತಃಸಿದ್ಧ.
ಎರಡನೆಯದು ವೈಧಿಕ ಭೌತಶಾಸ್ತ್ರ. ಇದು ವೇದದಲ್ಲಿ ಬರುವ ಋಷಿಗಳೇ ಸಮಾನ ಕಾಲದಲ್ಲಿ ಮಾಡಿದ ಅಗಾಧ ಸಂಶೋಧನೆಗಳ ಸಮುಚ್ಚಯ. ಪ್ರಕೃತಿಯ ಎಲ್ಲಾ ಜ್ಞಾನ, ವಿಜ್ಞಾನಗಳನ್ನು ಇನ್ನಿಲ್ಲದಂತೆ ವಿವರಿಸುತ್ತದೆ. ಅದಕ್ಕೆ ಬೆನ್ನೆಲುಬು ನೇರವಾಗಿ ವೇದಮಂತ್ರಗಳೇ ಆಗಿವೆ. ಈಗ…