Skip to main content

Posts

Showing posts from June, 2013

ವಚನ ಕಾವ್ಯಗಳಲ್ಲಿ ಜೀವನ ವರ್ಣನೆ-೧

ಮಕ್ಕಳೇ ಸಂಕಲ್ಪ ಬಲವಿರಬೇಕು, ಸ್ವಂತ ಸಾಹಸದಿಂದ ಮೇಲ್ಬರಬೇಕು – ಭೂಮಂಡಲವೆನೆ ಬರೇ ಅಂಗಳ, ಕಡಲು ಕೆರೆಯು, ಪಾತಾಳ ಸಮನೆಲ,ಮೇರು ಮಹಾಗಿರಿ ಹುತ್ತ ಕೇವಲ ಮನುಜನಿಗಿದ್ದರೆ ಸಂಕಲ್ಪ ಬಲ.ಹುಟ್ಟಿನಿಂದೇನು? ತಂದೆಯ ಮೈಮೆಯಿಂದೇನು? ತನ್ನಾರ್ಪಿನಿಂದ ಮೇಲ್ಮೆಗೆ ಬರುವ ತಾನು;ಬಾವಿಯೂ ಬತ್ತಲಾರದು ಕೊಡಗಳಿಂದ, ಕಡಲನೊಬ್ಬನೆ ಕುಡಿದನೋ ಕೊಡನ ಮಗನು.
ವಿಧ್ಯೆಯನ್ನು ಕಲಿಯಬೇಕು ಅದು ವಿನಯವನ್ನು ಕೊಡುವಂತಹದ್ದಾಗಿರಬೇಕು. ವಿಧ್ಯೆ ಕಾಣದವನ ಬಾಳು ನಾಯಿ ಬಾಲದಂತೆ ಗಾಳು,ಮಾನ ಮುಚ್ಚಲಾರದು ನೊಣ ಹೊಡೆಯಲು ಸಾಲದು.
ವಿನಯವಿಲ್ಲದಿರೆ ಮುಂದೆ ಸಾಕ್ಷರನು ಆಗುವ ರಾಕ್ಷಸನು -ಸಾಕ್ಷರನು ತಾ ತಿರುಗಿದರೆ ರಾಕ್ಷಸನೆ ಅವ ನಿಚ್ಚಟ,ತಿರುಗಿಬಿದ್ದರು ಸರಸನಾದವ ಸರಸತನವನು ಕೈಬಿಡ.
ಪ್ರಸಕ್ತ ಕಾಲದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸುವುದೇ ಉದ್ಯೋಗಕ್ಕಾಗಿ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಉದ್ಯೋಗದಲ್ಲಿಯೂ ಬಿಡದೆ ಸಾಧಿಸಬೇಕು-ಬಿಡದೆ ಉದ್ಯೋಗ ಮಾಡು, ಮಾರ್ಜಾಲವನು ನೋಡು;ಹಸುವ ಸಾಕಿದೆಯೆ? ಬೆಕ್ಕು ನಿತ್ಯ ಕುಡಿಯದೆ ಹಾಲು?
ಇನ್ನು ದುಡಿಯುವ ಹಂಬಲದಲ್ಲಿ ತಾವು ಕಲಿತ ವಿದ್ಯೆಗಳನ್ನೆಲ್ಲಾ ಮರೆದು ಎಂತಹಾ ಉದ್ಧಟ ವಾಕ್ಯಗಳನ್ನು ಉಚ್ಛರಿಸುವರೋ ನೋಡಿ!!ಹಸಿದರೆ ತಿನಬಹುದೇ ವ್ಯಾಕರಣ? ತೃಷೆ ಹಿಂಗಿಸುವುದೆ ಕವಿತಾ ಪಾನ?ಕುಲವುದ್ಧರಿಸದು ವೇದದ ಪಠನ; ಸುಡು ಗುಣಗಳ, ಶೇಖರಿಸಯ್ಯ ಹಣ!