Skip to main content

Posts

Showing posts from September, 2013

ಯೋಗಮಾಲೆ ಅಥವಾ ಸಾಧನಾ ಮಾಲೆ

|| ಶ್ರೀ ಗುರುಭ್ಯೋ ನಮಃ ||ಯೋಗಮಾಲೆ ಅಥವಾ ಸಾಧನಾ ಮಾಲೆಮಾಲೆಗಳ ಕುರಿತು ಒಂದು ಪರಿಚಯ ಲೇಖನ
ಮುಖ್ಯವಾಗಿ ನಮ್ಮ ಭಾರತೀಯ ಪರಂಪರೆಯಲ್ಲಿ ವಿಶಿಷ್ಟವಾದ ಕೆಲ ಮಾಲೆಗಳ ಇತಿಹಾಸ ಕಂಡುಬರುತ್ತವೆ.ಹಾಗೇ ತಂತ್ರಶಾಸ್ತ್ರಗಳಲ್ಲಿ ಕೆಲ ಮಾಲೆಗಳ ಕುರಿತು ವಿಶೇಷ ಮಾಹಿತಿ ಇರುತ್ತವೆ. ಅಲ್ಲದೆ ಋಗ್ವೇದದ ಕೆಲ ಭಾಗದಲ್ಲಿ ಮಣಿವಿಧ್ಯಾ ರೂಪದಲ್ಲಿ, ಅಥರ್ವಣದಲ್ಲಿ ಹಲವು ರೀತಿಯ ಮಣಿವಿಧ್ಯೆಗಳೂ ಕಂಡು ಬರುತ್ತವೆ. ರತ್ನಗಳನ್ನು ಮಾಲೆಗಳಾಗಿ ಸಂಯೋಜಿಸುವ ತಂತ್ರಜ್ಞಾನ ಭಾರತೀಯವಾಗಿ ಪುರಾತನ. ಅಲ್ಲದೆ ಕೆಲ ವಿಶಿಷ್ಟ ರತ್ನಗಳ ಗುಣ, ಧಾತು, ಶಕ್ತಿ, ಕಾಠಿಣ್ಯ, ಕಿರಣ, ಪ್ರಕಾಶ, ತೀಕ್ಷ್ಣತೆ, ಬಲ, ಯೋಗ, ಸಾಮ್ಯಗಳೂ ವರ್ಣಿಸಲ್ಪಟ್ಟಿವೆ. ಈ ದಶವಿಧದಲ್ಲಿ ಶ್ರೇಷ್ಠವೆನಿಸಿದ ರತ್ನಗಳ ಪರಿಚಯವನ್ನೂ ಕೂಡ ಹಲವು ಗ್ರಂಥಗಳಲ್ಲಿ ಉದಾಹರಿಸಲ್ಪಟ್ಟಿದೆ. ಹಾಗಾಗಿ ಈ ಬಗ್ಗೆ ಒಂದು ವಿಶೇಷ ಅಧ್ಯಯನ ಲೇಖನವೇ ಈ ಭಾಗ. ಓದಿ ಅರ್ಥಮಾಡಿಕೊಳ್ಳಿರಿ. ಹಾಗೆಯೇ ಯೋಗಿನೀ ತಂತ್ರಾಧಾರಿತವಾದ ಒಂದು “ಏಕೋತ್ತರ ಚತುರ್ಥಿ” ಸೂತ್ರಾಧಾರಿತವಾದ ಮಣಿಮಾಲೆಯ ಬಗ್ಗೆ ವಿಸ್ತೃತ ವಿವರಣೆ ಸಚಿತ್ರ ಲೇಖನವೂ ಇರುತ್ತದೆ. ಮೊದಲು ಕೆಲ ವಿಶಿಷ್ಟ ಮಾಲೆಗಳ ಪರಿಚಯ ಮಾಡಿಕೊಳ್ಳೋಣ. ಪುರಾಣೇತಿಹಾಸಗಳಲ್ಲಿ ಕೌಸ್ತುಭ, ವೈಜಯಂತಿ, ಚಂಪಕಾವಳಿ, ಮುಕ್ತಾವಳಿ, ರತ್ನಾವಳಿ, ವಿಜಯಮಾಲೆಗಳುಕ್ರಮವಾಗಿ ವಿಷ್ಣು, ಇಂದ್ರ, ಕುಬೇರ, ವರುಣ, ನಿರುತಿ, ಧರ್ಮರು ಧರಿಸಿದ್ದರೆಂದು ಕಂಡುಬರುತ್ತದೆ. ಅವೆಲ್ಲಾ ಕೆಲ ವಿಶಿಷ್ಟ ಗುಣಗಳನ್ನು ಹೊಂ…