Thursday, 15 May 2014

Balekudru Matha Narasimha Stuthi in Yakshagaana Style



ಶರಣು ಬಂದೆ ದೇವ ರಕ್ಷಿಸು ನರಸಿಂಹ ಸ್ವಾಮಿ ಹರಸು |
ನಿನ್ನಾ ನುಡಿಯನು ಮೆರೆಸು ಮೆರೆವ ಬಾಳೆಕುದ್ರು ಮಠದೊಳ್ |
ಇರುವ ಪಟ್ಟ ದೇವರಾದ ಪರಮ ಶಕ್ತಿವಂತ ನಿನ್ನ |
ಚರಣ ಭಜನೆ ಮಾಡಿ ನುತಿಪೆ ಶರಣ ಬಾಲ ನಿನ್ನ ಕರೆಯಲು |
ನರಹರಿಯೇ ಕಂಬ ಬಿರಿಯು ತಿಳಿದೆ ಘೋರ ಪಥದೊಳು |
ದುರುಳ ಕನಕ ಕಶ್ಯಪನನು ಉರವ ಬಗಿದು ಕೊಂದು ಕಳಿದು |
ತಿರೆಯ ಪೊರೆದ ಸುರವರೇಣ್ಯ ಶರಣು ಬಂದೆ ಸ್ವಾಮಿ ರಕ್ಷಿಸು || 

No comments:

Post a Comment