Skip to main content

ಭರದ್ವಾಜ ಮಂಡಲ : ಪ್ರಸೂತಿಕಾ ಶಾಸ್ತ್ರ ಗಣಿತ - 2

ಋಗ್ವೇದ ಮಂ.6 ಸೂಕ್ತ 44 ಮಂತ್ರ- 23
ಅಯಮಕೃಣೋದುಷಸಃ ಸುಪತ್ನೀರಯಂ ಸೂರ್ಯೋ ಅದಧಾಜ್ಜ್ಯೋತಿರಂತಃ | 
ಅಯಂ ತ್ರಿಧಾತು ದಿವಿ ರೋಚನೇಷು ತ್ರಿತೇಷು ವಿಂದದಮೃತಂ ನಿಗೂಳ್ಹಮ್ ||
ಭರದ್ವಾಜರ ಅಭಿಪ್ರಾಯವಿದು ಒಂದು ಸಂತಾನ ಅಥವಾ ಜೀವಿ ಭೂಮಿಗೆ ಬರಲು ಭೌತಶಾಸ್ತ್ರರೀತ್ಯಾ ಬಹಳ ಸರಳ ವ್ಯಾಖ್ಯಾನವಿದೆ. ಆದರೆ ತಂತ್ರಜ್ಞಾನರೀತ್ಯಾ ಚಿಂತಿಸಿದಲ್ಲಿ ಅದರೊಂದಿಗೆ ವಿಶಾಲ ಆಧ್ಯಾತ್ಮಿಕತೆ, ಮನೋಭೂಮಿಕೆ, ಪರಿಸರ, ಆಹಾರ, ಬದ್ಧತೆ, ಇಚ್ಛಾಶಕ್ತಿ ಮತ್ತು ಧೈವೀಕ ಕಾರಣ ಮತ್ತು ಅದನ್ನಾಧರಿಸಿದ ಋಣ, ಕರ್ಮಗಳೂ ಸೇರಿರುತ್ತವೆ. ಹಾಗಾದಾಗ ಅವೆಲ್ಲದರಲ್ಲಿ ಯಾವುದೇ ಕೊರತೆಯಾದರೂ ಸಂತಾನ ಫಲಿಸಲಾರದು. ಆದರೆ ತಂತ್ರಜ್ಞಾನದಿಂದ ಇವೆಲ್ಲಾ ಬಾಧ್ಯತೆಗಳನ್ನೂ ಒದಗಿಸಬಹುದೆಂದು ಅಭಿಪ್ರಾಯ ಪಡುತ್ತಾರೆ. ಅದರ ವಿಚಾರವಾಗಿಯೇ ಹಿಂದಿನ ಮಂತ್ರದಲ್ಲಿ ಹೇಳಿದ್ದು.


ಹೀಗೆ ಭರದ್ವಾಜರು ತಮ್ಮ ಸಂಶೋಧನೆಯಲ್ಲಿ ಕೃತಕ ಭ್ರೂಣ ತಯಾರಿಕೆ, ಕೃತಕ ವೀರ್ಯಾಣು ತಯಾರಿಕೆ, ಕೃತಕವಾಗಿಯೇ ಕುಂಭಗಳಲ್ಲಿ, ದ್ರೋಣಗಳಲ್ಲಿ, ವೇಣುಪಾತ್ರೆಗಳಲ್ಲಿ ಹೇಗೆ ಸಂತಾನ ಪಡೆಯಬಹುದು? ಎಂಬ ಸಂಶೋಧನೆಯಲ್ಲಿ ಅತೀ ಎತ್ತರಕ್ಕೇರಿದರು. ಅಲ್ಲಿ ಒಂದು ಸಣ್ಣ ವಂಶವಾಹೀ ಅಂಶವನ್ನು ಪಡೆದು ಹೇಗೆ ಅಭಿವೃದ್ಧಿಪಡಿಸಬಹುದು? ಎಂದು ಗಣಿತ ಸಮೀಕರಣ ರೀತ್ಯಾ ಬರೆದಿಟ್ಟರು. ಅದರ ಒಂದು ಉದಾಹರಣೆ ಗಮನಿಸಿ.ಒಂದು ಸವತ್ಸಾ ಅಂದರೆ ಆಗತಾನೇ ಕರು ಹಾಕಿದ ಹಸು, ಅದರ ಅಭಿವೃದ್ಧಿ ದರವನ್ನು ಹದಿನೈದು ವರ್ಷದ ಅವಧಿಯಲ್ಲಿ ಎಷ್ಟಾಗಬಹುದು? ಎಂಬುದು ಈ ಗಣಿತದ ಲೆಕ್ಕ. ಅದರ ಹಾಲು, ಗೊಬ್ಬರ ಮತ್ತು ಅವು ಮಾಡಿದ ಸಂತಾನೋತ್ಪತ್ತಿ ಒಟ್ಟು ಸೇರಿದರೆ ಅದರ ಪ್ರಮಾಣವನ್ನು ಹೇಳುತ್ತಾನೆ ಗಮನಿಸಿ.

ಒಂದು ಹಸು. ಅದರ ಮೊದಲು ಕರು. ಆ ಸಂದರ್ಭದಲ್ಲಿ ಉತ್ಪಾದಿತ ಹಾಲು, ಗೊಬ್ಬರ, ಮೇವು ಕಳೆದು ಮೊದಲ ವರ್ಷದ ಉಳಿಕೆ ಪ್ರಮಾಣ. 2ನೆಯ ವರ್ಷದಲ್ಲಿ ಅದು ಇನ್ನೊಂದು ಕರು, ಅದರ ಹಾಲು ಉತ್ಪಾದನೆ ಉಳಿಕೆ ಲಾಭ. ಮೂರನೇ ವರ್ಷಕ್ಕೆ ಮೂರನೇ ಕರು ಮತ್ತು ಮೊದಲ ಕರುವು ದನವಾಗಿ ಕರು ಹಾಕಿರುತ್ತದೆ. ಹಾಗೇ ಉತ್ಪಾದನೆ ಮತ್ತು ಅಭಿವೃದ್ಧಿ ದರ ಹೆಚ್ಚಿರುತ್ತದೆ. ಹಾಗೇ ನಾಲ್ಕನೇ ವರ್ಷಕ್ಕೆ ಮೂರು ದನ ಏಳು ಕರುವಾಯ್ತು. ಐದನೇ ವರ್ಷಕ್ಕೆ 4 ದನ 8 ಕರುವಾಯ್ತು. 6 ನೇ ವರ್ಷಕ್ಕೆ ಅದು 7 ದನ 11 ಕರುವಾಯ್ತು. ಹಾಗೇ ಮುಂದುವರಿಯುತ್ತಾ 15 ನೇ ವರ್ಷಕ್ಕೆ ಹಲವು ದನ ನಿರಂತರ ಹಾಲು ಉತ್ಪಾದನೆ. ಕರುಗಳು ಅವುಗಳ ಮುಂದಿನ ಅಂದರೆ 16 ನೇ ವರ್ಷದ ಉತ್ಪಾದನೆ ಗಮನಿಸಿ. ವಿಶಿಷ್ಟವಾದ ಒಂದು ನಿರಂತರ ಆದಾಯ ವ್ಯವಸ್ಥೆಗೆ ಹೊಂದಿಕೊಂಡಿರುತ್ತದೆ. ಇದೇ ಸಂತಾನ ಸರಪಳಿ.  ಇದು ಸ್ವಾಭಾವಿಕ ಸರಪಳಿ. ಆದರೆ ಭರದ್ವಾಜರು ಒಂದು ಸೂಕ್ಷ್ಮ ಕಿಣ್ವದಿಂದ ಇದರ ಹತ್ತುಪಟ್ಟು ವೃದ್ಧಿ ಸಾಧಿಸಬಹುದೆಂದೂ ಕಂಡು ಹಿಡಿದರು. ಅದೇ ಈ ಕೆಳಗಿನ ಮಂತ್ರ.

ಋ.ಮಂ.6 ಸೂ.44 ಮಂ.24
ಅಯಂ ದ್ಯಾವಾಪೃಥಿವೀ ವಿಷ್ಕಭಾಯದಯಂ ರತಮಯುನಕ್ ಸಪ್ತರಶ್ಮಿಮ್ | 
ಅಯಂ ಗೋಷು ಶಚ್ಯಾ ಪಕ್ವಮಂತಃ ಸೋಮೋ ದಾಧಾರ ದಶಯಂತ್ರಮುತ್ಸಮ್ ||

ಕಿರಣಾನುಪಾತವೆಂಬ ಸೂತ್ರದಡಿಯಲ್ಲಿ ಇದನ್ನು ಬರೆಯಲಾಗಿದೆ. ಸೂರ್ಯ ಕಿರಣದ ಹೊರಟ ಸಮಯ + ತತ್ಕಾಲ, ಸಮಯ + ಪ್ರಯಾಣ,  ಸಮಯ + ಸಂಖ್ಯಾಕ್ರಮವೆಂಬ ಚತುಷ್ಕೋಣವೃದ್ಧಿ ನಿಯಮದಂತೆ ಈ ಸೂತ್ರವಿರುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕು ಕಿರಣಪಾತವೆಂದರೇನೆಂದು. ಈ  ಭೂಮಿಯಿಂದ ಸುಮಾರು ಮೂರು ಕೋಟಿಗೂ ಮಿಕ್ಕಿ ಕಿ.ಮೀ. ದೂರದಲ್ಲಿರುವ ಸೂರ್ಯಕಿರಣ ಈ ಭೂಮಿಗೆ ಬಂದು ತಲುಪಲು ತೆಗೆದುಕೊಳ್ಳುವ ಸಮಯ + ದೂರ = ನಮ್ಮ ದೃಗ್ಗೋಚರ ಸೂರ್ಯ. ಆ ಸಮಯದ ನಂತರ ನಮ್ಮ ಕಣ್ಣಿಗೆ ಕಾಣಿಸುವ ಸೂರ್ಯ. ಅಷ್ಟು ಸಮಯದ ಹಿಂದಿನ ಸೂರ್ಯ ಹಾಗಿದ್ದರೆ ಕಿರಣಾನುಪಾತವನ್ನು ಹೇಗೆ ಲೆಕ್ಕಿಸಬಹುದು?  ಅದನ್ನು ಈ ಮೇಲೆ ಹೇಳಿದ ಸೂತ್ರದಂತೆ ಲೆಕ್ಕ ಹಾಕಿ ಅರಿಯಬೇಕು. ಹಾಗಿದ್ದಾಗ ನಮ್ಮ ಗಮನಕ್ಕೆ ಮುಖ್ಯವಾಗಿ ಕಾಣಸಿಗುವುದು ಸೂರ್ಯ ವರ್ತಮಾನವಲ್ಲ. ಅಂದರೆ ಸೂರ್ಯ ಕಿರಣ ಭೂಮಿಗೆ ತಲುಪುವ ಸಮಯದ ಹಿಂದಿನ ಭೂತಸೂರ್ಯ. ವರ್ತಮಾನ ಸೂರ್ಯನನ್ನು ಭವಿಷ್ಯದಲ್ಲಿ ಕಾಣ ಬೇಕಿದೆಯೇ ವಿನಃ ವರ್ತಮಾನದಲ್ಲಿ ಕಾಣಲಾಗದು. ಆದರೆ ಆ ಹೊತ್ತಿನ ಅಂದರೆ ವರ್ತಮಾನಕಾಲದ ಒಂದು ಸೆಕೆಂಡಿನ 70 ನೇ 1 ಭಾಗದಲ್ಲಿ ಭೂಪಾತವಾಗುವ ಶಕ್ತಿಯು ಪ್ರಮಾಣವೆಷ್ಟು ಗೊತ್ತೆ? ಹಿಂದಿನ ಭರದ್ವಾಜರ ವೈಮಾನಿಕ ಶಾಸ್ತ್ರದಲ್ಲಿ ಉದಾಹರಿಸಿದ ಒಂದು ಯಂತ್ರಶಕ್ತಿಯಲ್ಲಿ ಅದರ ಹತ್ತು x ಹತ್ತು ಪಟ್ಟು ಶಕ್ತಿ ಭೂಪಾತವಾಗುತ್ತದೆ. ಹಾಗಿದ್ದರೆ ಒಂದು ಸೆಕೆಂಡಿನ 70ನೇ 1 ಭಾಗದಲ್ಲಿ ಸೂರ್ಯನಿಂದ ಹೊರಡುವ ಶಕ್ತಿಯೆಷ್ಟು? ಭೂಮಿಯು ಅದರ ಒಟ್ಟು ವೃತ್ತದ 360 ಡಿಗ್ರಿಯ ಒಂದಂಶ 7 ನೇ 1 ಭಾಗ ಮಾತ್ರ ಭೂಪಾತವಾಗುವುದು ತಿಳಿದುಕೊಳ್ಳಿ.

ಇದನ್ನು ಏಕೆ ಉದಾಹರಿಸಿದೆನೆಂದರೆ ಪ್ರಕೃತಿಯ ಸ್ವಾಭಾವಿಕ ಚಲನೆಯ ಮುಖದತ್ತ ಸೂರ್ಯ. ಅದರ ನಡೆ ಆಧರಿಸಿ ಈ ಪ್ರಪಂಚದ ಚಲನೆ ಇದೆ. ಅದರ ನಡೆಯ ದಿಕ್ಕು ಪ್ರಾಚಿಯಿಂದ ಪ್ರತೀಚಿಯೆಡೆಗೆ. ಹಾಗಾಗಿಯೇ ಪ್ರತಿರೂಪ ಸೃಷ್ಟಿಯು ಸ್ವಾಭಾವಿಕ ಗುಣ. ಹಿಂದೆ ಹೇಳಿದ ದನದ ಲೆಕ್ಕದ ಸ್ವಾಭಾವಿಕ ಗುಣವಾಧರಿಸಿದರೇ ಅದು ಅಷ್ಟು ಅಗಾಧ ಪ್ರಮಾಣವಾಗುತ್ತದೆ. ಆದರೆ ಅದೇ ಕಪಾಲ ಸೃಷ್ಟಿಯ ವಿಧಾನ ಬೆಳೆಸಿದರೆ ಬರೇ ಒಂದು ಮುಹೂರ್ತಕಾಲದಲ್ಲಿ ಸಾಧ್ಯವೆಂದರು. 15 ವರ್ಷ=ಕಪಾಲ ಸೃಷ್ಟಿಯ ಒಂದು ಮುಹೂರ್ತಕಾಲ. ಹಾಗಿದ್ದರೆ ಗಮನಿಸಿ ಶಾಲಿವಾಹನನೆಂಬ ನಮ್ಮ ಶಖಪುರುಷ ಅಂದು ವಿಕ್ರಮನನ್ನು ಜಯಿಸಲು ಹೇಗೆ ಸೇನೆ ಸೃಷ್ಟಿಸಿದ ಎಂಬುದು ಅರ್ಥವಾಯ್ತೆ. ಇದೇ ವೇದಗಣಿತದ ರಹಸ್ಯ.

ಇಂತಹಾ ಸೃಷ್ಟಿ ಅಥವಾ ಕೃತಕ ಶಿಶುಗಳ ಸಂಖ್ಯೆಯಾಧರಿಸಿ ಬೇರೆ ಬೇರೆ ವಿಧಾನಗಳನ್ನು ಬಳಸಬಹುದೆಂದೂ ಕಂಡುಹಿಡಿದರು. ಇದು ಸಾಧ್ಯತೆಯ ಸಂಶೋಧನೆ. ಇನ್ನು ಪರಿಣಾಮ ಚಿಂತನೆ ಮಾಡಿದಲ್ಲಿ ಇಂತಹ ಸಮೂಹ ಸೃಷ್ಟಿಯಾದಲ್ಲೆಲ್ಲಾ ಸಮೂಹ ನಾಶವಾದದ್ದೇ ಹೆಚ್ಚು. ಉದಾ:- ನಮ್ಮ ದೇವೀಭಾಗವತದ ರಕ್ತಬೀಜ ಸಂತತಿ. ಫಲಕಾರಿಯಾದ ಉದಾಹರಣೆ ಇಲ್ಲ. ನಾಶವಾಗುವುದಕ್ಕೇ ಹುಟ್ಟಿದ್ದು. ಸಗರನ 60 ಸಾವಿರ ಮಕ್ಕಳು ಕಪಿಲನ ದೃಷ್ಟಿಗೆ ಸಿಕ್ಕಿ ಹಿಡಿ ಬೂದಿಯಾದರು. ಹೇಳಲಿಕ್ಕೆ ಒಬ್ಬರೂ ಉಳಿದಿಲ್ಲ. ಕೌರವರು ನೂರೊಂದು ಮಂದಿ ಒಮ್ಮೆಗೇ ನಾಶವಾದರು. ಕಪಿಂಜಲ ಸಂತತಿ ಕುರುಹೂ ಇಲ್ಲ. ಇಂದ್ರಸೇನನ ಸಂತತಿ ಹೆಸರೇ ಇಲ್ಲ. ಹೈಹಯರು ನಾಮಾವಶೇಷವಾದರು. ಚೈದ್ಯರು ಕುರುಹೂ ಇಲ್ಲದಂತೆ ನಾಶವಾದರು. ಅವರು ಅವರ ಜೀವಿತಕಾಲಾವಧಿ ಹಾಗು ಯಾವುದಾದರೊಂದು ಸಾಧನೆಯೂ ದಾಖಲಿಸಲಾಗಿಲ್ಲ. ಕಾರಣವೇನು? ವಿಕೃತಸೃಷ್ಟಿ. ಋಣ + ಕರ್ಮವಿಲ್ಲದಿರುವುದು.
ಅದಿರಲಿ ವರದಾಸೃಷ್ಟಿ ಅಥವಾ ಸಂತಾನ ಬಗ್ಗೆ ಕೆಲ ವಿಚಾರ ಬರೆಯುತ್ತೇನೆ. 

ಋ.ಮಂ.6 ಸೂ.45 ಮಂ.31,32,33
ಅಧಿ ಬ್ರುಬುಃ ಪಣೀನಾಂ ವರ್ಷಿಷ್ಠೇ ಮೂರ್ಧನ್ನಸ್ಥಾತ್ | ಉರುಃ ಕಕ್ಷೋ ನ ಗಾಂಗ್ಯಃ ||
ಯಸ್ಯ ವಾಯೋರಿವ ದ್ರವದ್ಭದ್ರಾ ರಾತಿಃ ಸಹಸ್ರೀಣೀ | ಸದ್ಯೋ ದಾನಾಯ ಮಂಹತೇ ||
ತತ್ಸು ನೋ ವಿಶ್ವೇ ಅರ್ಯ ಆ ಸದಾ ಗೃಣಂತಿ ಕಾರವಃ | 
ಬೃಬುಂ ಸಹಸ್ರದಾತಮಂ ಸೂರಿಂ ಸಹಸ್ರಸಾತಮಮ್ ||

ಒಂದಾನೊಂದು ಕಾಲದಲ್ಲಿ ಕೃತುವೆಂಬ ಮಹರ್ಷಿಯಿದ್ದ. ಆತನು ಸದಾ ತನ್ನ ತಪಸ್ಸು, ಸಾಧನೆ, ಸಂಶೋಧನೆ, ಅನುಷ್ಠಾನಗಳಲ್ಲೇ ನಿರತನಾಗಿದ್ದ. ಹಾಗೇ ಇರುತ್ತಿರಲಾಗಿ ಒಂದಿನ ಅಲ್ಲಿಗೆ ನಾರದನು ಬಂದನು. ಆತನು ಕೃತುವೇ, ನೀನು ಹೀಗೇಕೆ ಸುಮ್ಮನೆ ತಪೋನುಷ್ಠಾನ ಮಾಡುತ್ತಾ ಸುಮ್ಮನಿರುವೆ? ನಿನ್ನ ಭೌತಿಕ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲವೇಕೆ? ಈ ಭೂಮಿಯಲ್ಲಿ ಹುಟ್ಟಿದ ಪ್ರತೀ ಜೀವಿಗೂ ಸಾಮಾಜಿಕ ಬದ್ಧತೆ ಇದೆ. ಭೌತಿಕ ಕರ್ತವ್ಯವಿದೆ. ಅದನ್ನಾಲೋಚಿಸು ಎಂದು ಹೇಳಿ ಹೋದನು. ಆಗ ಎಚ್ಚೆತ್ತ ಕೃತುವು ನಾರದರ ಮಾತಿನ ಬಗ್ಗೆ ಚಿಂತಿಸತೊಡಗಿದ. ತನ್ನ ಕರ್ತವ್ಯ ಲೋಪದ ಬಗ್ಗೆ ಚಿಂತಿಸುತ್ತಾ ಹಾಗೇ ಆಶ್ರಮ ಬಿಟ್ಟು ನಡೆಯುತ್ತಾ ಹೋಗುವಾಗ ಭರದ್ವಾಜಾಶ್ರಮ ಸಿಕ್ಕಿತು. ಭರದ್ವಾಜರು ಕೃತು ಮಹರ್ಷಿಯನ್ನು ಕಂಡು ಸಂತೋಷದಿಂದ ಸ್ವಾಗತಿಸಿ ಆದರಾತಿಥ್ಯಗಳನ್ನು ನೀಡಿ ಸತ್ಕರಿಸಿದರು. ನಂತರ ಅವರಿಗೆ ಈ ರೀತಿಯಲ್ಲಿ ಪ್ರಶ್ನೆ ಮಾಡಿದರು.

1)    ಅಧಿ ಬ್ರಭುಃ ಫಣೀನಾಂ | ಫಣೇಃ ಬ್ರಭುಃ ಅಧಿ ಬ್ರಭುಃ ಪಣಯೊ ಪಣಯೊಃ ಅಧಿನಾಂ ಮಿತಿ |
2)  ಉರು ಕಕ್ಷ್ಯೋನ ಗಾಂಗ್ಯಃ | ಕಃ ಕಕ್ಷ್ಯಾಃ ಯಾ ಯಾ ನ ಉರು ಕಃ ಗಾಂ ಗಾವೇತಿ ಅಂಗ ಅಂಗ್ಯೇತಿ ಕಕ್ಷ್ಯಃ ಉರುಗಾಂಗ್ಯಃ |
3) ದ್ರವದ್ಭದ್ರಾರಾತಿ ಸಹಸ್ರಿಣೀ | ಸಹಸ್ರಾ ರಾ ಭದ್ರ ರಾತಿ ಧ್ರವಃ ದ್ರವತ್ಪಾಣಿ ಭದ್ರಾರಾತಿ  ಸಹಸ್ರಾಣಯೋಃ ಭದ್ರಮಿತಿ |

ಈ ಮೇಲ್ಕಂಡ ಮೂರು ಪ್ರಶ್ನೆಗಳನ್ನು ಕೇಳಿದ ಭರದ್ವಾಜರು ಉತ್ತರಾಕಾಂಕ್ಷಿಗಳಾಗಿ ನಿಂತರು. ಆಗ ಕೃತುವು ಅಯ್ಯಾ ಭರದ್ವಾಜನೇ, ನಿನ್ನ ಪ್ರಶ್ನೆ ಸಹಜ. ಹೀಗೆ ಏಕಾಏಕಿಯಾಗಿ ತಿರುಗುತ್ತಾ ಬರಲು ಬಲವಾದ ಕಾರಣವಿದೆ. ವ್ಯರ್ಥ ತಿರುಗುವವನು ನಾನಲ್ಲ. ಹಾಗೇ ನನ್ನ ಆಶ್ರಮದಲ್ಲಿಯೇ ಉತ್ತರ ಪಡೆಯಲಶಕ್ತನೂ ಅಲ್ಲ. ಯಾವುದೇ ಅಸಂತುಷ್ಟಿ ನನಗೆ ಹುಟ್ಟಿಲ್ಲ. ಹಾಗೇ ನನ್ನ ಆಶ್ರಮದಲ್ಲಿ ಯಾರಿಗೂ ಆಹಾರ ವಿಹಾರಾದಿ ಕೊರತೆಯೂ ಇಲ್ಲ. ಎಲ್ಲವೂ ಸುಗಮವಾಗಿದೆ. ಸುಸೂತ್ರವಾಗಿದೆ. ನಾನು ಹೀಗೆ ಏಕಾಂಗಿಯಾಗಿ ಬರಲು ಒಂದು ಬಲವಾದ ಕಾರಣವಿದೆ. ಅದಿಲ್ಲದೆ ನಾನು ಬರುತ್ತಿರಲಿಲ್ಲ. ನಿನ್ನ ಆಶ್ರಮದ ಭೇಟಿ ಕೇವಲ ಕಾಕತಾಳೀಯ. ಆದರೆ ಧೈವಸಂಕಲ್ಪವಿದೆಯೆಂದು ನಾನು ಬಲ್ಲೆ. ಅಯ್ಯಾ ಭರದ್ವಾಜನೇ, ನೀನು ನಿನ್ನ ಸಂಗಡಿಗರೂ ಸೇರಿ ಸಾಧಿಸಿದ ಸೃಷ್ಟಿ ಪ್ರಕ್ರಿಯಾ ಸಂಶೋಧನೆ  ನನ್ನ ಅರಿವಿಗೆ ಬಂದಿದೆ. ಆದರೆ ನಾನೊಂದು ಮಾತನ್ನು ಹೇಳುತ್ತೇನೆ. ಈ ಎಲ್ಲಾ ನಿನ್ನ ಸಂಶೋಧನೆಯೂ ನಿನ್ನ ಅವಶ್ಯಕತೆಗೆ ಆಧರಿಸಿದ್ದಲ್ಲವೆ? ಇದರಲ್ಲಿ ಸಮಾಜಮುಖಿ ಸಂಶೋಧನೆ ಏನಿದೆ? ನಿನ್ನ ಗೋತ್ರಜರು ನಿಸ್ಸಂತಾನವಾಗಬಾರದೆಂದು ನೀನು ಈ ಸಂಶೋಧನೆ ಕೈಗೊಂಡೆಯೇ ವಿನಃ ಸಮಾಜದ ಅಗತ್ಯಕ್ಕಾಗಿ ಅಲ್ಲವಲ್ಲ. ನಾನು ಕೂಡ ಹೀಗೆ ತಪೋನುಷ್ಠಾನ ನಿರತನಾಗಿ ಕುಳಿತಿದ್ದಾಗ ದೇವರ್ಷಿ ನಾರದನು ಬಂದು ನನ್ನನ್ನು ಎಚ್ಚರಿಸಿದನು. ನೀನು ಕರ್ತವ್ಯದಿಂದ ವಿಮುಖನಾಗಿದ್ದೀಯ. ಭೌತಿಕ ಕರ್ತವ್ಯ + ಸಾಮಾಜಿಕ ಬದ್ಧತೆ ಇಲ್ಲ ನಿನಗೆ ಎಂದು ತೆಗಳಿ ಸತ್ಕಾರ ಸ್ವೀಕರಿಸದೇನೇ ಹೊರಟು ಹೋದ. ಅದಕ್ಕಾಗಿ ಹಿಂದಿನ ಬ್ರಹ್ಮಕಲ್ಪದಲ್ಲಿ ತಪೋನುಷ್ಠಾನವನ್ನು ಆರಂಭಿಸಿದ ನಾನು ಈ ಸಾವಿತ್ರ ಕಲ್ಪದಲ್ಲಿ ನಾರದನಿಂದ ಎಚ್ಚರಗೊಂಡೆ. ನಾರದನ ನಿಂದಾ ವಾಕ್ಯ ಕೇಳಿ ನನಗೂ ಕುತೂಹಲ ಹುಟ್ಟಿದೆ. ಈಗಿನ ಪ್ರಸಕ್ತ ಕಾಲದ ಸಮಾಜ ಬಾಧ್ಯತೆಗಳೇನು? ನಾನು ಏನು ಪೂರೈಸಬಹುದು ಎಂದು ಅರಿಯೋಣವೆಂದು ಹೀಗೆ ತಿರುಗುತ್ತಾ ಬಂದಾಗ ನಿನ್ನ ಆಶ್ರಮ ಸಿಕ್ಕಿತು. ನಿನ್ನ ಆದರಾತಿಥ್ಯ ತುಂಬಾ ಸಂತೋಷವಾಯಿತು. ಹಾಗೇ ನಿನ್ನ ರೀತಿ, ನೀತಿ, ನಡತೆ, ಕ್ರಮ, ನಿಯಮ, ನ್ಯಾಯ, ಸಾಧನೆ, ಸಾಧ್ಯತೆಗಳನ್ನು ಅರಿತುಕೊಂಡೆ. ಸ್ಥೂಲವಾಗಿ ನೋಡಿದಾಗ, ಸಮಕಾಲೀನ ಬ್ರಹ್ಮರ್ಷಿಯಾದ ನೀನು ಕೂಡ ನಿನ್ನ ಗೋತ್ರಜರನ್ನೇ ಗುರಿಯಾಗಿಟ್ಟು ಈ ಸಂಶೋಧನೆ ಕೈಗೊಂಡೆ ಎನ್ನಿಸುತ್ತದೆ. ಹಾಗಿದ್ದರೆ ಸಾಮಾಜಿಕ ಬದ್ಧತೆ ಎಂದರೇನು? ಈ ಕಾಲದ ಕರ್ತವ್ಯಗಳೇನು ಎಂದು ಪುನಃ ಭರದ್ವಾಜನನ್ನೇ ಪ್ರಶ್ನಿಸಿದನು. ಆಗ ಭರದ್ವಾಜನು ಮೇಲೆ ಉದಾಹರಿಸಿದ ಮಂತ್ರ ಉದಾಹರಿಸಿ ತನ್ನ ಸಂಶೋಧನೆ ವಿಶ್ವ ವ್ಯಾಪಕ. ಎಲ್ಲರಿಗೂ ಅನುಕೂಲವಾಗಲೆಂದೇ ಕಂಡುಹಿಡಿದೆ. ನಿಮ್ಮಂತಹಾ ಹಿರಿಯರ ಶುಭಾಶಿಷಃ ಕಾರಣದಿಂದ ಯಶಸ್ವಿಯಾಗಿದ್ದೇನೆ. ಹಾಗೇ ಈ ನನ್ನ ಕೊನೆಯ ಸಂಶೋಧನೆಯಾದ “ವರದಾ”ವನ್ನು ತಮಗೆ ಧಾರೆ ಎರೆಯುತ್ತೇನೆ. ಇದನ್ನು ಲೋಕಮುಖಕ್ಕೆ ಹಂಚಿರೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದನು. ಹಸಾದವೆಂದು ಸಂತೋಷದಿಂದ ಸ್ವೀಕರಿಸಿದ ಕೃತುವು ಅದನ್ನು ಪಡೆದು ಪೂರ್ವಮುಖವಾಗಿ ಮುಂದೆ ನಡೆದನು. ಕೃತುವು ಈ ವಿಧಾನವನ್ನು ಲೋಕಕ್ಕೆ ಹಂಚುತ್ತಾ ಕೃತಕೃತ್ಯನಾದನು. ಹಾಗಾಗಿ ಕಾಮ್ಯೇಷ್ಟಿಗಳಲ್ಲಿ ಶ್ರೇಷ್ಠವಾದ ಪುತ್ರಕಾಮ್ಯೇಷ್ಟಿಯೂ “ಕೃತು”ವೆನ್ನಿಸಿಕೊಂಡಿದೆ. ಕೃತು ಎಂದರೆ ಯಾಗ, ಯಜ್ಞವೆಂಬ ಸಮಾನಾರ್ಥಕವಿದೆ. ಆದರೆ ಕೃತುವಿನಿಂದ ಕೊಡಲ್ಪಟ್ಟದ್ದಾದ್ದರಿಂದ “ವರಕೃತು” ಎಂದು ಪ್ರಸಿದ್ಧವಾಗಿದೆ. ಇದರ ಒಂದು ವಿಶಿಷ್ಟ ಗಣಿತ ಸೂತ್ರ ಗಮನಿಸಿ:ಎತ್ತರ ಆಕಾಶದಲ್ಲಿ ಹಾರುತ್ತಿರುವ ಗಿಡುಗ, ಕೆಳಗೆ ಕೆರೆಯ ನೀರಿನಲ್ಲಿ ತೇಲುತ್ತಿರುವ ನೀರು ಹಾವು ಪ್ರತೀ ೩ಸೆಕೆಂಡಿಗೊಮ್ಮೆ ನೀರಿನಲ್ಲಿ ಮುಳುಗಿ ೭ಮೀಟರ್ ಕ್ರಮಿಸಿ (ಗಜವೆಂದೂ) ನಂತರ ತಲೆ ಎತ್ತುತ್ತದೆ. ಹಾಗೆಯೇ ಗಿಡುಗನಿಂದ ತಪ್ಪಿಸಿಕೊಳ್ಳುತ್ತಾ ಅದು ದಡ ಸೇರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಹಾಗೇ ಗಿಡುಗ ಇರುವ ಎತ್ತರವೆಷ್ಟು? ಕೆರೆಯ ಅಗಲ + ಉದ್ದವೆಷ್ಟು? ಇಲ್ಲಿ ಮುಖ್ಯವಾಗಿ ಗಮನಿಸಬೇಕು – ಗಿಡುಗನಿಗೆ ಹಾವು ಆಹಾರವಾಗಿ ಸಿಗುವುದಿಲ್ಲ. ಕೆರೆಯ ದಡದ ಪೊದೆಗಳು ಗಾಢವಾಗಿದೆ. ಗಿಡುಗನ ಆಕ್ರಮಣ ವೇಗ ಸೆಕೆಂಡಿಗೆ ೭ಮೀಟರ್. ಹಾವಿನ ಚಲನ ವೇಗ ಸೆಕೆಂಡಿಗೆ ೩ಮೀಟರ್. ಒಟ್ಟು ಮುಳುಗುವ + ತೇಲುವ + ಗಮಿಸುವ ದೂರ + ಸಂಖ್ಯೆ ಸೇರಿದರೆ ಹಾವು ಎಷ್ಟು ಬಾರಿ ಮುಳುಗಿ, ಎಷ್ಟನೇ ಬಾರಿ ದಡ ಸೇರಿತು?

ಇದು ಕರ್ಮಾಧಾರಿತ ಜೀವ ಸಂಕುಲದ ಹುಟ್ಟು + ಸಾವು ಸಂಖ್ಯೆಯನ್ನು ನಿಖರವಾಗಿ ಅಳೆಯುವ ಒಂದು ವಿಧಾನವೆಂದು ಕೃತು ಉದಾಹರಿಸಿದ. ಇಲ್ಲಿ ಜೀವ ಕಾಮನಾದ ಹಾವು + ಆಹಾರ ಕಾಮನಾದ ಗಿಡುಗ + ಆಶ್ರಯ ಧಾತವಾದ ಕೆರೆ ಹಾಗೂ ವಿಸ್ತಾರ ಪ್ರಕೃತಿ, ಜಲ ವಾಯು, ಶಾಖ + ಒಂದು ಪ್ರಕೃತಿ ಆಶ್ರಿತ ಜೀವಿ. ಎರಡು ಆಕಾಶ ಆಶ್ರಿತ ಜೀವಿ. ಇವೆರಡರ ಸಮತೋಲನಕ್ಕೆ ೩ ಕಾಲಗಳನ್ನು ಅಥವಾ ೩ ಭೂತವನ್ನು ದಾಟಿಯೇ ಆಕ್ರಮಿಸಬೇಕು. ಇದು ತಿಳಿದಿರಲಿ.

ಇದನ್ನೇ ಕೃತುವು ತನ್ನ ಯಾಗ ಸೂತ್ರದಲ್ಲಿ, ಕಾಮ್ಯೇಷ್ಟಿಗಳಲ್ಲಿ ಫಲಕಾಮಿಯಾದ ಅಧ್ವರ್ಯುವು ಕೈಗೊಳ್ಳಬೇಕಾದ ನಿಯಮ ಬದ್ಧತೆಯನ್ನು ಆಧರಿಸಿ ಹೇಳಿದ್ದಾನೆ. ಇಲ್ಲಿ ಹಾವಿಗೆ ರಕ್ಷಣೆಯೋ ಅಥವಾ ಗರುಡನೋಟವೋ ಮುಖ್ಯವಾಗಿಲ್ಲ. ಗರುಡನ ಫಲ ಉದ್ದೇಶಿತವಾದರೆ ವೇಧಿ ಹೇಗಿರಬೇಕು? ಹಾವಿಗೆ ರಕ್ಷಣೆಯಾದರೆ ವೇಧಿ ಹೇಗಿರಬೇಕು ಎಂಬುದು ಇಲ್ಲಿ ಮುಖ್ಯ. “ಕಾಮ್ಯೇಷ್ಟಿಗಳಲ್ಲಿ ಫಲ ಮುಖ್ಯವೇ ವಿನಃ ಕರ್ಮ ಮುಖ್ಯವಲ್ಲ”. ಫಲಾಕಾಂಕ್ಷಿಯಾದವನು ಏನಕ್ಕೇನೂ ಪ್ರಯತ್ನ ಮಾಡಬಹುದು. ಹಾಗಾಗಿ ಭರದ್ವಾಜ ಪ್ರಣೀತ “ವರದಾಕೃತು”ವೆಂಬ ಕಾಮ್ಯೇಷ್ಟಿ ಕೃತುವಿನಾ ಮುಖೇನ ದೇಶವೆಲ್ಲಾ ವ್ಯಾಪಿಸಿತು. ಫಲಾಪೇಕ್ಷೆ ಪ್ರಧಾನ ಕರ್ಮಗಳು ಜಾರಿಗೆ ಬಂತು. ಆತ್ಮೋನ್ನತಿಗಾಗಿ ಮಾಡುವ “ಆತ್ಮಜಿದ್ಯಾಗಾದಿ”ಗಳು ಮರೆಯಾದವು. ಪ್ರಕೃತಿ ನಿರಂತರವಾಗಿ ಪ್ರವಹಿಸಲು ಆರಂಭಿಸಿತು. ಕೃತುವು ಸಮಾಜಕ್ಕೆ ಕೊಡಬೇಕಾದ ಕೊಡುಗೆ ಕೊಟ್ಟು, ಭೌತಿಕ ಬದ್ಧತೆ ಮುಗಿಸಿ ಪುನಃ ತನ್ನ ತಪೋನುಷ್ಠಾನ ಕಾರ್ಯಕ್ಕೆ ತೆರಳಿದ. “ಭ್ರಾಂತ ಮಾನವ ವರ್ಗ ದೇಹ ವ್ಯಾಮೋಹದಿಂದ ಆತ್ಮನನ್ನು ಮರೆಯಿತು”.

ಋಗ್ವೇದ ಮಂಡಲ ೬, ಸೂಕ್ತ ೬೩, ಮಂತ್ರ ೯,೧೦,೧೧:
ಉತ ಮ ಋಜ್ರೇ ಪುರಯಸ್ಯ ರಧ್ವೀ ಸುಮೀಳ್ಹೇ ಶತಂ ಪೇರುಕೇ ಚ ಪಕ್ವಾ | 
ಶಾಂಡೋ ದಾದ್ಧಿರಣಿನಃ ಸ್ಮದ್ದಿಷ್ಟೀನ್ದಶ ವಶಾಸೋ ಅಭಿಷಾಚ ಋಷ್ವಾನ್ || ೯ ||
ಸಂ ವಾಂ ಶತಾ ನಾಸತ್ಯಾ ಸಹಸ್ರಾಶ್ವಾನಾಂ ಪುರುಪನ್ಥಾ ಗಿರೇ ದಾತ್ | 
ಭರದ್ವಾಜಾಯ ವೀರ ನೂ ಗಿರೇ ದಾದ್ಧತಾ ರಕ್ಷಾಂಸಿ ಪುರುದಂಸಸಾ ಸ್ಯುಃ || ೧೦ ||
ಆ ವಾಂ ಸುಮ್ನೇ ವರಿಮನ್ತ್ಸೂರಿಭಿಃ ಷ್ಯಾಮ್ || ೧೧ ||

ಮಾನವನು ಆತ್ಮೋನ್ನತಿಯ ಮಾರ್ಗದಲ್ಲಿ ಭೌದ್ಧಿಕ ಉನ್ನತಿಯನ್ನು ಸಾಧಿಸುತ್ತಾ, ಭೌತಿಕ ಕರ್ತವ್ಯ ನಿರ್ವಹಣೆ ಹೇಗೆ ಮಾಡಬಹುದು ಎಂಬುದಕ್ಕೆ ಕೃತುವು ಒಂದು ಉತ್ತಮ ಉದಾಹರಣೆ ತೋರಿಸಿದ. ಭರದ್ವಾಜನ ಕಷ್ಟಾರ್ಜಿತ ಸಂಶೋಧನೆ ಭರದ್ವಾಜನಿಗೆ ಅಗತ್ಯವಿಲ್ಲದ್ದು. ಭೌತಿಕ ಜಗತ್ತಿನಲ್ಲಿ ಕಾಮನೆಗಳು ವಿಪುಲವಾಗಿವೆ. ಬೇಕು ಎಂಬ ವಿಪುಲ ಅಪೇಕ್ಷೆ ಬಲವಾಗಿದೆ. ಅದು ಇಷ್ಟಿಗಳ ಮುಖೇನವೂ ಪಡೆಯಬಹುದು ಎಂದು ಕೃತುವು ಸಮಾಜಕ್ಕೆ ತೋರಿಸಿಕೊಡುತ್ತಾ, ಜನರಲ್ಲಿ ಕರ್ತೃತ್ವ ಶಕ್ತಿ ಹುಟ್ಟಿಸಿ ತನ್ನ ಭೌತಿಕ ಜಗತ್ತಿನ ಋಣ ತೀರಿಸಿಕೊಂಡು ತಾನು ತಪೋನುಷ್ಠಾನ ನಿರತನಾದ. ಋಣ ಮುಕ್ತನಾಗಿ ಹೇಗಿದೆ? ಪ್ರಪಂಚ ತನಗೇಕೆ ಬೇಕು ಎಂದು ಚಿಂತಿಸದೆ ಈ ಕಾಮ್ಯೇಷ್ಟಿಗಳ ಗೋಜಲಿನಲ್ಲಿ ಸಿಲುಕಿ ನಿರಂತರೆತೆ ಸಿಕ್ಕಿತು. ಹಾಗೆ ಮುಂದಿನ ಈ ಮಂತ್ರದಲ್ಲಿ ಇನ್ನೊಂದು ಲೆಕ್ಕಾಚಾರವನ್ನು ಹೇಳುತ್ತಾನೆ, ಗಮನಿಸಿ:

ಉದಾಹರಣೆ:- ಒಂದು ಉದ್ದೇಶ = ಹಣ್ಣು. ಬೆಲೆ ಸಮ ಕಾಲ.
ಸಂಖ್ಯೆ = ಮೊತ್ತ ಹಣ್ಣು, ಕೊಳೆತ = ಸವಕಳಿ. ಜೀವನ ಸವಕಳಿ.
೧ ಹಣ್ಣಿನ ಬೆಲೆ = ೧ ರೂ.
೧೦೦ ಹಣ್ಣಿದೆ = ಮೂಲ ಬೆಲೆ ೧೦೦ ರೂ.

ದಿನಕ್ಕೆ ೨೪ ಹಣ್ಣು ಮಾತ್ರ ಮಾರಾಟ. ದಿನಕ್ಕೆ ೬ ಹಣ್ಣು ಕೊಳೆತು ಹಾಳಾಗುತ್ತದೆ. ಮೂಲ ಬೆಲೆಗೆ ಕೊರತೆ ಇಲ್ಲದಂತೆ ಹೆಚ್ಚಿನ ಲಾಭವೂ ಇಲ್ಲದಂತೆ ಯಾವ ಬೆಲೆಯಲ್ಲಿ ಮಾರಿದರೆ ಲಾಭಾಲಾಭ ಸಮನಾಗುತ್ತದೆ? ಇದನ್ನರಿತವನೇ ಜಾಣನೆಂದಿದ್ದಾರೆ. ಅಂದರೆ ಋಣ + ಕರ್ಮವಿದ್ದು ಜನನ ಜನ್ಮಾರಭ್ಯ ಉಪಭೋಗ ಮತ್ತು ಸಂಚಯನ. ಕರ್ಮವಿಪಾಕ + ಋಣವಿಮೋಚನೆ: ಇವು ಸಮನಾದರೆ “ಜೀವನ್ಮುಕ್ತಿ”. ಇದು ಈ ಲೆಕ್ಕದ ಉದ್ದೇಶ. ಇದನ್ನು ಅರ್ಥಮಾಡಿಕೊಂಡು ಜೀವನ್ಮುಕ್ತರಾಗುವತ್ತ ಪ್ರತಿಯೊಬ್ಬನ ಗುರಿ ಇರಬೇಕೆಂದು ಹೇಳಿರುತ್ತಾರೆ. ಇದೊಂದು ಆತ್ಮನ ವೃದ್ಧಿ ದರ ಸೂಚ್ಯಂಕವೇ ವಿನಃ ಬೇರೇನೂ ಅಲ್ಲ. ಇಲ್ಲಿ ಹಣ್ಣಿನ ಬೆಲೆ ಒಟ್ಟು ೧೦೦ ರೂಪಾಯಿಯಾಗಿದ್ದು, ೧ ದಿನಕ್ಕೆ ೨೪ ಹಣ್ಣು ಮಾತ್ರ ಮಾರಬೇಕೆಂದು ಸವಕಳಿ ಕಳೆದು ಒಟ್ಟು ಮೊತ್ತ ನೂರೇ ರೂಪಾಯಿ ಪಡೆಯಲು ಏನು ಮಾಡಬೇಕು ಎನ್ನುವುದು ಸಮಸ್ಯೆ. ದಿನ ಕಳೆದಂತೆ ಬೆಲೆ ಹೆಚ್ಚಿಸುವಂತಿಲ್ಲ. ಮೊದಲ ದಿನ ಸವಕಳಿ ಇಲ್ಲ. ಮೊತ್ತವು ಮಾರಾಟದ ನಂತರ ೧೦೦ ರೂ ಆಗಿರಬೇಕು.

ಇಲ್ಲಿ ಕಾಣುವ ಮುಖ್ಯಾಂಶ ಆತ್ಮೋನ್ನತಿ. ಜೀವ ಹೊರತು ಪಡಿಸಿ ಪಂಚ ಪಂಚವೇ ೨೪ + ೧ = ಮಾರಾಟ ಮಾಡುವ ಹಣ್ಣು. ೧ ದಿನ = ೧ ಜನ್ಮ. ಆತ್ಮೋನ್ನತಿಯ ಸಂಕಲ್ಪ ವರ್ಷದ ಆರಂಭ. ಅಲ್ಲಿ ಕೊಳೆತನವಿಲ್ಲ. ನಂತರ ಎರಡನೆಯ ಜನ್ಮದಲ್ಲಿ ಆತ್ಮಕ್ಕೆ ಸಂಬಂಧಿಸಿದ್ದ ಷಡ್ವೈರಿಗಳೆಂಬ ೬ ಕೊಳೆತು ಹೋಗುತ್ತವೆ. ೩ನೇ ಜನ್ಮದಲ್ಲಿ ದೈಹಿಕ ಸಂಬಂಧಿಸಿ ಷಡ್ವೈರಿ ನಾಶ. ೪ನೇ ಜನ್ಮದಲ್ಲಿ ಭೌತಿಕ ಋಣಾಧಾರಿತ ಷಡ್ವೈರಿಗಳು ನಾಶವಾಗಿ, ಉಳಿದ ೪ ಎಂದರೆ ಧರ್ಮ, ಅರ್ಥ, ಕಾಮ, ಮೋಕ್ಷ ಲಾಭವಾಗುವುದೆಂದು ಅಭಿಪ್ರಾಯ. ಹೀಗೆ ಆಧ್ಯಾತ್ಮಿಕ ಚಿಂತನೆಯ ಲೆಕ್ಕಗಳು ಹಲವಾರು. ಇವನ್ನೆಲ್ಲ ವಿಸ್ತರಿಸುತ್ತಾ ಹೋಗಲು ಅವಕಾಶ ಕಡಿಮೆಯಾದ್ದರಿಂದ, ಒಂದು ಉದಾಹರಣೆ ಮಾತ್ರ ಬರೆದು ಮುಂದಿನ ವಿಚಾರಕ್ಕೆ ಬರುತ್ತೇನೆ.

ಋಗ್ವೇದ ಮಂಡಲ ೬, ಸೂಕ್ತ ೭೪, ಮಂತ್ರ ೧-೪.
ಸೋಮಾರುದ್ರಾ ಧಾರಯೇಥಾಮಸುರ್ಯಂ ೧ ಪ್ರ ವಾಮಿಷ್ಟಯೋಽರಮಶ್ನುವಂತು | 
ದಮೇದಮೇ ಸಪ್ತ ರತ್ನಾ ದಧಾನಾ ಶಂ ನೋ ಭೂತಂ ದ್ವಿಪದೇ ಶಂ ಚತುಷ್ಪದೇ || ೧ ||
ಸೋಮಾರುದ್ರಾ ವಿ ವೃಹತಂ ವಿಷೂಚೀಮಮೀವಾ ಯಾ ನೋ ಗಯಮಾವಿವೇಶ | 
ಆರೇ ಬಾಧೇಥಾಂ ನಿರ್ಋತಿಂ ಪರಾಚೈರಸ್ಮೇ ಭದ್ರಾ ಸೌಶ್ರವಸಾನಿ ಸಂತು || ೨ ||
ಸೋಮಾರುದ್ರಾ ಯುವಮೇತಾನ್ಯಸ್ಮೇ ವಿಶ್ವಾ ತನೂಷು ಭೇಷಜಾನಿ ಧತ್ತಮ್ | 
ಅವ ಸ್ಯತಂ ಮುಂಚತಂ ಯನ್ನೋ ಅಸ್ತಿ ತನೂಷು ಬದ್ಧಂ ಕೃತಮೇನೋ ಅಸ್ಮಾತ್ || ೩ ||
ತಿಗ್ಮಾಯುಧೌ ತಿಗ್ಮಹೇತೀ ಸುಶೇವೌ ಸೋಮಾರುದ್ರಾವಿಹ ಸು ಮೃಳತಂ ನಃ | 
ಪ್ರ ನೋ ಮುಂಚತಂ ವರುಣಸ್ಯ ಪಾಶಾದ್ಗೋಪಾಯತಂ ನಃ ಸುಮನಸ್ಯಮಾನಾ || ೪ ||

ಕೊನೆಯಲ್ಲಿ ಭರದ್ವಾಜರು ಆಂಶಿಕ ಭಿನ್ನರಾಶಿ ಸೂತ್ರದಂತೆ, ಕಳೆದಷ್ಟೂ ಮೂಲಸಂಖ್ಯೆ ವೃದ್ಧಿಯಾಗುತ್ತಾ ಹೋಗುವ ಒಂದು ವಿಶಿಷ್ಟ ಪ್ರಮೇಯವನ್ನು ಉದಾಹರಿಸಿ ಈ ಲೋಕ ಭಾಜಿಸಿದಷ್ಟೂ ಶೇಷವೇ! ಎಂದಿಗೂ ನಿಃಶೇಷವಾಗದ್ದು. ಹಾಗಾಗಿ ಪ್ರಕೃತಿ, ಅಸತ್ಯ, ಮಾಯೆ, ಭ್ರಾಂತ, ದೃಗ್ಗೋಚರ. ಆದರೆ ಶಾಶ್ವತ. ಎಲ್ಲಿಯವೆರೆಗೆ ಜೀವಿಗಳಿಗೆ ಮಾಯಾವೇಷ್ಟನವಿರುತ್ತದೆಯೋ ಅಲ್ಲಿಯವರೆಗೆ ಈ ದೃಗ್ಗೋಚರ ಪ್ರಪಂಚವಿರುತ್ತದೆ. ಹಾಗಾಗಿ ಈ ಪ್ರಕೃತಿ ಮಧ್ಯದ ಸಕಲ ಚರಾಚರಗಳು, ಸಕಲ ಜೀವಿಗಳೂ ಸುಖಾಕಾಂಕ್ಷಿಗಳಾಗಿ ಅದನ್ನೇ ಲಾಭವೆಂದು ತಿಳಿದಿದ್ದಾವೆ. ಆ ಸುಖಕ್ಕೆ ಮೂಲವಾದದ್ದು ಸಂಪತ್ತು ಎಂದು ಭ್ರಾಂತಿಗೊಳಗಾಗಿದ್ದಾವೆ. ನಿರಂತರ ನಿತ್ಯ ನೂತನ ಜಗತ್ತಿನ ಮಾಯೆಯನ್ನು ಅರಿಯದ ಈ ಲೋಕ ಉನ್ನತಿಗಾಗಿ ನಾನು ಹಿಂದೆ ತಿಳಿಸಿದ ಕೆಲ ನನ್ನ ಸ್ವಯಾರ್ಜಿತ ಸಂಶೋಧನೆಗಳನ್ನು ಕೊಟ್ಟಿದ್ದೇನೆ. ಇದು ಭ್ರಾಂತ ಮನಸ್ಸಿನ ಜೀವಿಗಳಿಗೆ ಅರ್ಥವಾದರೆ ಆತ್ಮೋನ್ನತಿಗೆ ಬೇಕಾದ ಔಷಧ. ಇಲ್ಲವಾದಲ್ಲಿ ಭ್ರಾಂತ ಮನಸ್ಸಿನಿಂದಲೇ ಸ್ವೀಕರಿಸಿ ವಿಪುಲ ಸಂಪತ್ತು, ಸುಖ, ಸಂತೋಷ, ಸಂತಾನಪ್ರದವಾದ ವಿಧ್ಯೆ. ಯಾರು ಹೇಗೆ ಬೇಕೋ ಹಾಗೆ ಸ್ವೀಕರಿಸಲಿ. ನಿರಂತರ ಸೋಮ + ರುದ್ರವು ಈ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಿಗೂ ಸುಖಪ್ರದವಾಗಲಿ ಎಂದು ಹಾರೈಸುತ್ತೇನೆ ಎಂದರು. ಆದರೆ ಆತ್ಮನ ಮುಖ್ಯ ಗುರಿ ಈ ಪ್ರಾಪಂಚಿಕ ಪಾಶದಿಂದ, ಅಂದರೆ ಜೀವ ಜಗತ್ತೆಂಬ ವರುಣ ಪಾಶದಿಂದ ಮುಕ್ತಿ ಪಡೆಯುವುದೇ ಆಗಿರುತ್ತದೆ ಎಂದು ಸಾರುತ್ತಾ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಹಾರೈಸಿದರು.
ಇಂತು
ಕೆ. ಎಸ್. ನಿತ್ಯಾನಂದ,
ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು

Comments

  1. ಬಹಳ ಅದ್ಬುತವಾದ ವಿಚಾರವನ್ನು ತಿಳಿಸಿದ್ದಕ್ಕೆ ಆಭಾರಿ. ನಿಮ್ಮಲ್ಲಿ ಒಂದು ಕೊರಿಕೆ. ಇದೇ ರೀತಿ ಋಗ್ವೇದದಲ್ಲಿ ಬರುವ ಪವಮಾನ ಸೂಕ್ತದ ವಿಶಿಷ್ಟತೆ ಬಗ್ಗೆ ತಿಳಿಸಿದರೆ ನಮ್ಮ ಭಾಗ್ಯವೆಂದು ಭಾವಿಸುತ್ತೇವೆ

    ReplyDelete
    Replies
    1. ಋಗ್ವೇದದ ಪ್ರತಿ ಮಂಡಲದಲ್ಲಿನ ಸಂಖ್ಯಾಶಾಸ್ತ್ರೀಯ ಮಹತ್ವಗಳನ್ನು ಪುನರುತ್ಥಾನಗೊಳಿಸಲಾಗುತ್ತಿದೆ. ಒಂಬತ್ತನೆಯ ಮಂಡಲ ಬಂದಾಗ ಪವಮಾನದ ವಿಚಾರಗಳು ಬರುತ್ತವೆ. ಕಾದು ನೋಡಿರಿ.

      Delete

Post a Comment

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…