Skip to main content

Posts

Showing posts from May, 2014

ಬೀಜಗಣಿತದ ಏಕವರ್ಣ ಸಮೀಕರಣ : ವಯೋಮಾನ ಲೆಕ್ಕ (Aptitude Interview Question)

ಮಲಯದೊಳ್ ಶ್ರೀ ಬಿಂದು ಎಂಬೀರ್ವ ಕಿನ್ನರಿಯರು ಬಲು ಚೆಂದದಿಂ ಆಡುತಿರೆ ಬಂದು ಕೇಳಿದನಂದು ಶರದಂಕೆಯ ಋತುರಾಜ ನಾನು ನಿನ್ನಾಯುಷವ ಬಿಂದುಬಿಟ್ಟು ಪೇಳೆಂದನು | ಎನ್ನಯನದ ಬಿಂದುವಿನ ಗುಣಿತವು ಎನ್ನಾಯು, ಕರವರುಷದ ಮುನ್ನ ಚಿಕ್ಕಿಗಿಂತ ನಾಲ್ಮೀರಿದೊಂದು ರವಿಕಾಂತಿ ಉದಿಸೆ, ತಾಳೆಬೇಡ ತಾಳು ಮೊತ್ತಕೆ ಕಷ್ಟಗಳ ಕೂಡಿದರೂ ತಾಳಿಗೆ ಸಿಗೆ ತಾಳೈ ಸಿರಿ ತಾನೆಂದಳು  || ೨ ||
ಲೆಕ್ಕ: ಶರದಂಕೆ = 5. ಐದನೇ ಋತುರಾಜ = ಹೇಮಂತ, ಬಿಂದುಬಿಟ್ಟು = ಪೂರ್ಣ ಸಂಖ್ಯೆ. B =ತಂಗಿ ಬಿಂದುವಿನ ಪ್ರಸಕ್ತ ವಯಸ್ಸು, S = ಅಕ್ಕ ಶ್ರೀಯ ಪ್ರಸಕ್ತ ವಯಸ್ಸು ಪ್ರಸಕ್ತ: ನಯನ = 3. ಹಾಗಾಗಿ S = 3B ಕರವರುಷ = 2 ವರ್ಷದ ಹಿಂದೆ:    ಬಿಂದು: B - 2    ಶ್ರೀ:    S - 2,
ಸಮೀಕರಣ:    ನಾಲ್ಮೀರಿದೊಂದು ರವಿಕಾಂತಿ ಉದಿಸೆ = 4ನ್ನು ಗುಣಿಸಿ 1 ಕೂಡಿಸಿ S - 2 = 4(B - 2) + 1 3B - 2 = 4B - 7 ತಂಗಿಯ ಪ್ರಸಕ್ತ ವಯಸ್ಸು: B = 5, ಅದಕ್ಕಿಂತ 8 (ಅಷ್ಟಕಷ್ಟಗಳು) ಜಾಸ್ತಿ => 13 ಅಕ್ಕಳ ಪ್ರಸಕ್ತ ವಯಸ್ಸು: S = 3B = 15, ಅದಕ್ಕಿಂತ 8 (ಅಷ್ಟಕಷ್ಟಗಳು) ಜಾಸ್ತಿ => 23 ವಿಶ್ಲೇಷಣೆ:- ಈ ಏಕವರ್ಣ ಸಮೀಕರಣವನ್ನು ಭಾಸ್ಕರಾಚಾರ್ಯರ ಬೀಜಗಣಿತ ಉದಾಹರಣೆಗಳಿಂದ ಜೋಪಾನವಾಗಿ ೩ ದಿವಸ ಸತತ ಅಧ್ಯಯನದಿಂದ ರಚಿಸಿದೆನು. ರಚನಾ ಕೌಶಲ್ಯದಲ್ಲಿ ಶಬ್ದ ಚಮತ್ಕಾರಗಳೂ ಬಂದಿವೆ. ಲೆಕ್ಕದ ಆದಿಯಲ್ಲಿ ಪ್ರಾಕೃತಿಕ ವಿಭಜನೆಯನ್ನು ವರ್ಣಿಸಿದೆ. ಈ ಲೋಕದ ತ್ರಿಭುವನಗಳೆಂದರೆ ಸಹ್ಯಾದ್ರಿ ಮಲೆನಾಡು, ಪಶ್ಚಿಮ ಕ…

ಬೀಜಗಣಿತದ ಏಕವರ್ಣ ಸಮೀಕರಣ: ಸೇನಾತುಕುಡಿ ಲೆಕ್ಕ

ನಗರದಲೊಂದು ಸೇನಾ ತುಕುಡಿಯು ಗಸ್ತು ತಿರುಗುತಿರಲೊಬ್ಬ ಜವರನು ಬಂದು ಕೇಳಿದ ನೀವೆಷ್ಟು ಮಂದಿಗಳು? ನುಡಿದ ಸವಾರನೀ ತುಕುಡಿಯ ದುಪ್ಪಟ್ಟು ಮುಂದಿದೆ ಮೂರ್ಪಟ್ಟು ಹಿಂದಿದೆಯೆಂದು ನಸುನಗುತ | ಮೂರ್ತುಕಡಿಗಳ ಯೋಗದ ದಶಮಾಂಶ ಪದಾಧಿಕಾರಿಗಳಿರೆ ಇವರೆಲ್ಲ ಸೇರಿ ೧೯೮ ಮಂದಿಗಳಿರೆ, ಬೇಗ ಲೆಕ್ಕಿಸು ತರಳ ಜವಾನರೆಷ್ಟು? ಪದಾಧಿಕಾರಿಗಳೆಷ್ಟು? ಬುದ್ಧಿವೈಶದ್ಯಕಿದು ಸಂಬದ್ಧ ಲೆಕ್ಕವು || ೧ ||
ಲೆಕ್ಕ:- J =ಪ್ರತಿ ತುಕುಡಿಯಲ್ಲಿನ ಜವಾನರು, P = ಪದಾಧಿಕಾರಿಗಳು, J' = ಎಲ್ಲಾ ತುಕುಡಿಯಲ್ಲಿನ ಜವಾನರು. 3J + J + 2J = 198 => J = 33 ತಾಳೆ:-99 + 33 + 66 = 198 ದಶಮಾಂಶ P:- 9.9 + 3.3 + 6.6 = 18.18 = 18 (ಅಭಿನ್ನ ಮಾನವ ಲೆಕ್ಕವಾದ್ದರಿಂದಭಿನ್ನರಾಶಿ ಬಿಡಿರಿ) J' = 198 - P   = 198 - 18 ಜವಾನರು = 180, ಪದಾಧಿಕಾರಿಗಳು = 18

ಋಗ್ವೇದ ವಾಮದೇವ ಮಂಡಲದ ಜೈವಿಕ-ತಂತ್ರಜ್ಞಾನ ಗಣಿತ -2

ಸಕಲ ಪ್ರಾಣಿಗಳಿಗೂ ಅನ್ನ ಮುಖ್ಯ. ಹಾಗೆ ಅದು ಬುದ್ಧಿ ಪ್ರಚೋದಕ, ಅಹಂಕಾರ ವಿಮೋಚಕ, ಚಿತ್ತ ನಿರೋಧಕ ಮತ್ತು ಹೇಗೆ ಜ್ಞಾನ ಪ್ರದಾಯಕವೆಂಬುದನ್ನು ಗೌತಮರು ವಿವರಿಸುತ್ತಾರೆ ಗಮನಿಸಿ.
ಋಗ್ವೇದ ಮಂಡಲ-೪, ಸೂಕ್ತ-೧೫, ಮಂತ್ರ ೧-೧೦
अ॒ग्निर्होता॑ नो अध्व॒रे वा॒जी सन्परि॑ णीयते । दे॒वो दे॒वेषु॑ य॒ज्ञिय॑: ॥ परि॑ त्रिवि॒ष्ट्य॑ध्व॒रं यात्य॒ग्नी र॒थीरि॑व । आ दे॒वेषु॒ प्रयो॒ दध॑त् ॥ परि॒ वाज॑पतिः क॒विर॒ग्निर्ह॒व्यान्य॑क्रमीत् । दध॒द्रत्ना॑नि दा॒शुषे॑ ॥ अ॒यं यः सृञ्ज॑ये पु॒रो दै॑ववा॒ते स॑मि॒ध्यते॑ । द्यु॒माँ अ॑मित्र॒दम्भ॑नः ॥ अस्य॑ घा वी॒र ईव॑तो॒ऽग्नेरी॑शीत॒ मर्त्य॑: । ति॒ग्मज॑म्भस्य मी॒ळ्हुष॑: ॥ तमर्व॑न्तं॒ न सा॑न॒सिम॑रु॒षं न दि॒वः शिशु॑म् । म॒र्मृ॒ज्यन्ते॑ दि॒वेदि॑वे ॥ बोध॒द्यन्मा॒ हरि॑भ्यां कुमा॒रः सा॑हदे॒व्यः । अच्छा॒ न हू॒त उद॑रम् ॥ उ॒त त्या य॑ज॒ता हरी॑ कुमा॒रात्सा॑हदे॒व्यात् । प्रय॑ता स॒द्य आ द॑दे ॥ ए॒ष वां॑ देवावश्विना कुमा॒रः सा॑हदे॒व्यः । दी॒र्घायु॑रस्तु॒ सोम॑कः ॥ तं यु॒वं दे॑वावश्विना कुमा॒रं सा॑हदे॒व्यम् । दी॒र्घायु॑षं कृणोतन ॥

ಮಾನವ ಮನಸ್ಸನ್ನೇ ಮುಖ್ಯವಾಗಿ ತೆಗೆದುಕೊಂಡಲ್ಲಿ ಅದು ಸದಾ ಮೂರು ಕಾರಣಗಳಿಂದ ಅತೃಪ್ತವಾಗಿಯೇ ಇರುತ್ತದೆ.