Skip to main content

Posts

Showing posts from November, 2014

ಕುಮುದೇಂದುಮುನಿಯ ಸಿರಿಭೂವಲಯದ ಕೆಲವು ಸಾಂಗತ್ಯ ಪದ್ಯಗಳು

ಸಿರಿಭೂವಲಯದ ಕವಿಕಾವ್ಯಸಾರ (ಒಂದು ಕಿರು ಕಥನಕಾವ್ಯ) ರಚನೆ: ಸಿರಿಭೂವಲಯದ ಸುಧಾರ್ಥಿ 

ಒರೆಯುತಿಹೆ ನಾನೀಗ| ಧರೆಯಸೌಭಾಗ್ಯವನು||ಗುರು ಕುಮುದೇಂದು ರಚಿಸಿರುವ| ಸಿರಿಪಾದ ಕಾವ್ಯವನು||ಪ||

ಆದಿನಾಥರಕಾವ್ಯ| ಭೇದವಳಿಸುವಕಾವ್ಯ||
ಬೋಧಿಸಿದ ಗೊಮ್ಮಟನ| ಸುಧೆಯಸಾಗರಕಾವ್ಯ||೧||

ಅಜಿತನಾಥರಕಾವ್ಯ| ಶಂಭವನಶುಭಕಾವ್ಯ||
ಅಭಿನಂದನರು ಸುಮತಿ| ಸಮ್ಮತಿಸಿದಕಾವ್ಯ||೨||

ಪದುಮಪ್ರಭತುಂಬಿರುವ| ಸುಪಾರ್ಶ್ವನಾಥರಕಾವ್ಯ||
ಚಂದ್ರಪ್ರಭದೇವ| ಪುಷ್ಪದಂತರಕಾವ್ಯ||೩||

ಶೀತಲಶ್ರೇಯಾಂಸವಾಸುಪೂಜ್ಯ| ವಿಮಲಾನಂತಧರ್ಮ||
ಶಾಂತಿಕುಂತುವುಮತ್ತೆ| ಅರನೊರೆದಸಿರಿಕಾವ್ಯ||೪||

ಮಲ್ಲಿನಾಥರುಇತ್ತ|  ಸುವ್ರತರುನಮಿನೇಮಿ||
ಪಾರ್ಶ್ವನಾಥರನುಡಿಯು| ಮಹವೀರವಾಣಿ||೫||

ಯದುನಂದನನಗೀತೆ| ಭೂವಲಯಸಂಜಾತೆ||
ವ್ಯಾಸರುಸುರಿದವಾಣಿ| ಪರಬೊಮ್ಮನಾರಾಣಿ||೬||

ಅದ್ವೈತಸಾಗರಕೆ| ಮೇರೆಇರಿಸದಕಾವ್ಯ||
ಸ್ಯಾದ್ವಾದದಾಸಿರಿಯು| ತುಂಬಿಗರಿಯುವಕಾವ್ಯ||೭||

ಧಾರಿಣಿಯಗುರುಫಣನ| ಮೀರಿಬೆಳೆದಿಹಕಾವ್ಯ||
ಧರೆಯಮಾನವರೆಲ್ಲ| ಒಂದೆನುವಸಿರಿಕಾವ್ಯ||೮||

ಧರಸೇನ ಗುಣಸೇನ| ಕುಂದಕುಂದರಜ್ಞಾನ||
ಸಿಂಧುಶಯನನಸಿರಿಯು| ಕುಮುದೇಂದುಧ್ಯಾನ||೯||

ವೀರಸೇನರ ವಿವರ| ಜಿನಸೇನರಾ ಪ್ರವರ||
ಗುರುಪರಂಪರೆವಾಣಿ| ಭೂವಲಯರಾಣಿ||೧೦||

ಕರಕಮಲದಲಗಳಲಿ| ವೈರಾಗ್ಯವರಿತವರು||
ಧರೆಯಜನಗಳಿಗೆಲ್ಲ| ಧರುಮವರುಹುತಲಿಹರು||೧೧||

ಸಕಲವನುಬಲ್ಲವನು| ಸುತನೆಂಬಪ್ರೇಮದಲಿ||
ಜಕಿಲಕಿಯಬ್ಬೆತಾ| ಬರೆಸಿರುವಸಿರಿಕಾವ್ಯ||೧೨||

ಮಲ್ಲಿಕಬ್ಬೆಯಭಕ್ತಿ| ಗುರುಶಕ್ತಿ ಮುಕ್ತಿ||
ಹ…

ಸರ್ವಭಾಷಾಮಯೀಭಾಷಾ ಸಿರಿಭೂವಲಯ ಒಂದು ಪರಿಚಯ

ಆತ್ಮೀಯಬಂಧುಗಳೆ, ಕನ್ನಡಭಾಷೆ; ಸಾಹಿತ್ಯ; ಸಂಸ್ಕೃತಿಯವಿಚಾರದಲ್ಲಿನಿಮಗೆಸಾಕಷ್ಟುಪರಿಚಯವಿರಬಹುದು. ಆದರೆ, ಅವುಗಳಿಗೆಲ್ಲವಕ್ಕೂಕಸವರದಕಳಶವಿಟ್ಟಂತೆನೀವೀಗಜಗತ್ತಿನಹತ್ತನೆಯಅಚ್ಚರಿಯನ್ನುಕರ್ಣಾಟಕರಾಜ್ಯೋತ್ಸವದಸುಸಂದರ್ಭದಲ್ಲಿಕಾಣಲಿರುವಿರಿ!ವಿಶ್ವಭಾಷೆಯಸರಪಳಿಯಲ್ಲಿಬರುವ೭೧೮ಭಾಷೆಗಳಿಗೆಸೇರಿದಸಾಹಿತ್ಯದಸಾರ, ೩೬೩ಮತಧರ್ಮಗಳಿಗೆಸಂಬಂಧಿಸಿದವಿಚಾರಗಳು; (ಸರ್ವಧರ್ಮಸಮನ್ವಯ)