Skip to main content

***ಕನ್ನಡ ಅಕ್ಷರಗಳು ೭೫೦ ಕೋಟಿ ವರ್ಷಗಳಿಗೂ ಹಳೆಯವು***

ಸರ್ವಭಾಷಾಮಯಿಭಾಷಾ ಸಿರಿಭೂವಲಯವನ್ನು ದೇಶೀಅಂಕಗಳ ದೇಶೀಕಾವ್ಯವೆಂದು ಕನ್ನಡದ ಮಹತ್ವವನ್ನು ಸಾರಿದ್ದಾನೆ ಕವಿ. ಇಂದ್ರಪದವಿಯಕಾಲಾವಧಿಯು ದೀರ್ಘವಾದುದು. ಇಂಥ ೧೦೦ ಇಂದ್ರರ ಕಾಲದಿಂದಲೂ ಈ ಮಾತುಗಳು (ಧ್ವನಿಗಳು,ಅಕ್ಷರಗಳು) ಇರುವುದಾಗಿಯೂ ಅವು ಸವೆದು ಹೋಗಿರುವವೆಂದೂ ಕನ್ನಡಲಿಪಿಯ ಪ್ರಾಚೀನತೆಯನ್ನುಸ್ಪಷ್ಟಪಡಿಸಿದ್ದಾನೆ. ಇಷ್ಟು ಖಚಿತವಾದ ಮಾಹಿತಿಯನ್ನು ಮೂಲೆಗುಂಪುಮಾಡಿ, '೧೫೦೦ ವರ್ಷಗಳ ಹಿಂದೆ ಕನ್ನಡಭಾಷೆಯು ಲಿಪಿಬದ್ಧವಾಗಿರಲೇ ಇಲ್ಲ' ಎಂದು ನಿರ್ಧರಿಸುವುದು ಎಷ್ಟರಮಟ್ಟಿಗೆ ಸೂಕ್ತವೆಂಬುದನ್ನು ಓದುಗರೇ ನಿರ್ಧರಿಸಬೇಕು!

'ಉಪಲಬ್ದವಿರುವ ಸಾಹಿತ್ಯಿಕ ಮಾಹಿತಗಳ ಆಧಾರದಲ್ಲಿ ಕುಮುದೇಂದುವಿನ ಹೇಳಿಕೆಯಂತೆ ಕನ್ನಡ ಅಂಕಿಗಳು ಹಾಗೂ ಅಕ್ಷರಗಳಿಗೆ ೭೫೦ ಕೋಟಿ ವರ್ಷಗಳಿಗೂ ಹಿಂದಿನ ಇತಿಹಾಸ ಇದೆ' ಎಂದು ಸಿರಿಭೂವಲಯ ಸುಧಾರ್ಥಿಯವರು ಸೂಚಿಸಿದ್ದಾರೆ. ಅದಕ್ಕೆ ಕೆಲ ಮುತ್ಸದ್ದಿಗಳು 'ಅಷ್ಟೊಂದು ಪ್ರಾಚೀನ ಕಾಲದ ಪಳೆಯುಳಿಕೆಯು ಜಗತ್ತಿನಲ್ಲಿ ಯಾವುದೂ ಇಲ್ಲ' ಎಂದು ಹೇಳುತ್ತಾ ಅವರ ಅಭಿಪ್ರಾಯವನ್ನು ಉಪೇಕ್ಷಿಸಿದ್ಧುಂಟು!





ಈಗ 'ಟೆರೋಸಾರಸ್' ಎಂಬುದು ೨೧೫ ದಶಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ (೨೧.೫ ಕೋಟಿ ವರ್ಷಗಳು) ಹಾರುವ ಡೈನೋಸಾರಸ್. ಅದರ ರೆಕ್ಕೆ ೧೨ ಮೀಟರ್ ಅಗಲವಿತ್ತು. ಈಗಿನ ಎಫ್. ೧೬ ವಿಮಾನದ ರೆಕ್ಕೆಗಿಂತ ದೊಡ್ಡದು. ಜರ್ಮನಿಯ ಸಾಲ್ಮೊಫೆನ್ ಎಂಬಲ್ಲಿ ಈ ಪಳೆಯುಳಿಕೆ ಸಿಕ್ಕಿದೆ' ಎಂಬ ಮಾಹಿತಿಯು ದಿನಾಂಕ ೨೬-೧೦-೨೦೧೨ರ ಪ್ರಜಾವಾಣಿಯ ಮೈಸೂರಿನ ಆವೃತ್ತಿಯಲ್ಲಿ ಪ್ರಕಟವಾಗಿದೆ. ೨೧.೫ ಕೋಟಿ ವರ್ಷಗಳ ಹಿಂದೆ ಅಂಥ ರಾಕ್ಷಸ ಪಕ್ಷಿಯು ಇರಬೇಕಾದರೆ, ಅದರ ವಿಕಾಸಕ್ಕೆ ಹಿಂದಿನ ಎಷ್ಟು ಕೋಟ್ಯಾಂತರ ವರ್ಷಗಳ ಜಗತ್ತು ಇರಬೇಕೆಂಬುದನ್ನು ವಿಚಾರಶಾಲಿಗಳು, ವಿಜ್ಞಾನಾರಾಧಕರು ಊಹಿಸಿಕೊಳ್ಳಬೇಕು. ಮನಸೋ ಇಚ್ಛೆ ನಮ್ಮ ಪ್ರಾಚೀನ ಪುರಾಣಗಳು, ಶಾಸ್ತ್ರಗಳು, ಇವುಗಳಿಗೆ ಆಧಾರವಾದ ಉಪನಿಷತ್ತು; ಶೃತಿ; ಸ್ಮೃತಿ; ವೇದಗಳನ್ನು ನಿರಾಕರಿಸುವುದು ಸೂಕ್ತವಲ್ಲ. (ಹತ್ತಬಡಿದರೆ ಹಾವು ಸತ್ತೀತೆ?!)



ಆಕರ:-

೧. Dinosaur find: Velociraptor ancestor was 'winged dragon'   BBC - July 16, 2015.
೨. Ornithomimus dinosaur with preserved tail feathers and skin tightens linkages between dinosaurs and birds   PhysOrg - October 28, 2015
೩. Fossil dinosaur tracks give insight into lives of prehistoric giants   PhysOrg - December 1, 2015
೪. Feathered Fossils Give Scaly Dinosaurs a Makeover   National Geographic - December 10, 2014
೫. Oldest horned dinosaur species in North America found in Montana   PhysOrg - December 10, 2014
೬. Mystery of dinosaur with giant arms solved   BBC - October 22, 2014
೭.   Dinosaur With Mysteriously Large Nose Discovered in Utah   Epoch Times - September 24, 2014
೮.  Four-winged flying dinosaur unearthed in China   The Guardian - July 15, 2014

["ಜಗತ್ತಿನ ಹತ್ತನೇ ಅಚ್ಚರಿ" ಪುಸ್ತಕದಿಂದ ಆಯ್ದ ಲೇಖನ]

ಪರಿಚಯಕಾರರು
ಸಿರಿಭೂವಲಯ ಸುಧಾರ್ಥಿ,

ಹಾಸನ

Comments

Post a Comment

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…