Skip to main content

Posts

Showing posts from January, 2015

ಸಿರಿಭೂವಲಯ : "ಜಗತ್ತಿನ ಹತ್ತನೇ ಅಚ್ಚರಿ" ಪುಸ್ತಕ ಬಿಡುಗಡೆ

ಇಂದು ೨೯-೦೧-೨೦೧೫ರಂದು ಕಾರ್ಕಳದ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕವಾಗುವ ಸುಸಂದರ್ಭದಲ್ಲಿ ಹಾಸನದ ಸಿರಿಭೂವಲಯ ಸುಧಾರ್ಥಿಯವರ ಸರ್ವಭಾಷಾಮಯೀಭಾಷಾ ಸಿರಿಭೂವಲಯಕ್ಕೆ ಸಂಬಂಧಸಿದಂತೆ  "ಜಗತ್ತಿನ ಹತ್ತನೇ ಅಚ್ಚರಿ" ಎಂಬ ಪುಸ್ತಕವು ಡಾ. ವೀರೇಂದ್ರ ಹೆಗ್ಗಡೆ ದಂಪತಿಗಳಿಂದ ಲೋಕಾರ್ಪಣೆಗೊಂಡಿತು. ಕನ್ನಡದ ಆದಿ ಕವಿ ಕುಮುದೇಂದು ಮುನಿಯ ಸಿರಿಭೂವಲಯದ ಪ್ರಥಮ ಖಂಡದ ೫೯ ಅಧ್ಯಾಯಗಳನ್ನು ಕುರಿತ ಒಂದು ಸಂಕ್ಷಿಪ್ತ ಪರಿಚಯ ಇದಾಗಿದೆ. 

ಇದರ ಮೊದಲ ಮಾತು-೨ ಎಂಬಲ್ಲಿ ಸಿರಿಭೂಲಯದ ಬಗೆಗಿನ ನನ್ನ ಕೆಲ ವರ್ಷಗಳ ಸಂಶೋಧನಾ ಅನುಭವ ಸಾರವನ್ನು ಎರಡು ಪುಟದಲ್ಲಿ ವ್ಯಕ್ತಪಡಿಸಲು ಅವಕಾಶಕೊಟ್ಟಿದ್ದಕ್ಕಾಗಿ ಸಿರಿಭೂವಲಯ ಸುಧಾರ್ಥಿಯವರಿಗೆ ನಾನು ಆಭಾರಿ.
“ಪುಣ್ಯಕಾಮ”ನೆಂಬ ಅರ್ಥಶಾಸ್ತ್ರಜ್ಞನ ಮಾತಿನಂತೆ ನಾವೆಲ್ಲಿ ತಪ್ಪಿದ್ದೇವೆ?

ಹಣ! ಹಣ! ಹಣ! ದುರಾಶೆಗೆ ಬಲಿ ಬಿದ್ದ ಮಾನವ ಮಾಡುವ ದೊಡ್ಡ ತಪ್ಪು ಹಣ ಮಾಡುವುದು. ನಂತರ ಆ ಹಣದ ಬಲದಿಂದ ಅಪರಾಧ ಮಾಡುವುದು. ಹಾಗೆ ದೇಶದ್ರೋಹಿಯಾಗಿ ಬೆಳೆಯುತ್ತಾ ನಂತರ ಆಳುವ ಸರಕಾರವನ್ನೇ ಎದುರಿಸಿ ಭೂಗತನಾಗುವುದು. ನಂತರ ಭಯೋತ್ಪಾದಕನಾಗುವುದು. ಇದಕ್ಕೆಲ್ಲಾ ಕಾರಣ ಮೂಲಭೂತವಾದ ಈ ಹಣವೇ. ಹಾಗಿದ್ದರೆ ಹಣವೆಂದರೇನು? ಸ್ವಾಭಾವಿಕವಾಗಿ ತನ್ನ ಅಗತ್ಯಕ್ಕಾಗಿ, ಆಹಾರಕ್ಕಾಗಿ ದುಡಿಯುವ ಹಣ ಶ್ರಮದ್ದು. ಅದು ಸತ್ಕಾರ್ಯದಲ್ಲಿ ಮಾತ್ರಾ ಉಪಯೋಗವಾಗುತ್ತದೆ. ಆದರೆ ಅಳತೆಯಿಲ್ಲದೆ ದುಡಿಮೆಯಾಗುವ ಹಣ ಎಂದೂ ಸದ್ಬಳಕೆಯಾಗಲಾರದು. ಅದು ಮುಂದೆ ದೇಶದ್ರೋಹೀ ಕೃತ್ಯಗಳಲ್ಲಿ ತನ್ನ ಪಾತ್ರ ಮಾಡಿಯೇ ಮಾಡುತ್ತದೆ. ಹಾಗಾಗಿ ದುಡಿಮೆಯಿಂದ ನೈಜವಾದ ಶ್ರಮಕ್ಕೆ ತಕ್ಕ ಆರ್ಥಿಕ ಶಕ್ತಿ+ ಶ್ರಮವಿಲ್ಲದ ಕೇವಲ ಮೋಸ, ವಂಚನೆ, ಸಮಾಜ ದ್ರೋಹದಿಂದ ಉತ್ಪಾದನೆಯಾಗುವ ಹಣಬಲ, ಅದು ದೇಶದ್ರೋಹಿಯನ್ನು ಸೃಷ್ಟಿ ಮಾಡುತ್ತದೆ. ಸಮಕಾಲೀನ ಭಾರತದಲ್ಲಿ ಈ ರೀತಿಯ ಒಂದು ವಿಚ್ಛಿದ್ರಕಾರೀ ಬೆಳೆ ಬೆಳೆಯುತ್ತಿದೆಯೆನ್ನಿಸುತ್ತಿದೆ. ಅದರ ಬಗ್ಗೆ “ಪುಣ್ಯಕಾಮ”ನೆಂಬ ಅರ್ಥಶಾಸ್ತ್ರಜ್ಞನ ಮಾತಿನಂತೆ ನಾವೆಲ್ಲಿ ತಪ್ಪಿದ್ದೇವೆ? ಚಿಂತಿಸೋಣ.
ಮೊದಲಾಗಿ ನಮ್ಮ ದೇಶೀಯ ಅರ್ಥವ್ಯವಸ್ಥೆ ಮತ್ತು ಮೀಸಲುನಿಧಿ ಹಾಗೂ ವಿತ್ತ ಸಚಿವಾಲಯದ + ಭಾರತೀಯ ರಿಸರ್ವ್ ಬ್ಯಾಂಕಿನ ಧೋರಣೆ ಹೇಗಿದೆ? ಅದಕ್ಕೆ ಆಧರಿಸಿ ಕಾನೂನು + ನ್ಯಾಯಾಂಗ ಹೇಗೆ ವ್ಯವಹರಿಸುತ್ತದೆ? ಜೊತೆ ಜೊತೆಯಲ್ಲಿ ರಾಜಕಾರಣ ಮತ್ತು ನಮ್ಮ ಆರಕ್ಷಕ ಇಲಾಖೆ ಇದರ ಕ…