Skip to main content

Posts

Showing posts from May, 2015

ಋಗ್ವೇದದ ಯಮ-ಯಮೀ ಸೂಕ್ತ

      ವೇದಗಳು ಸಂಸ್ಕೃತದಲ್ಲಿಲ್ಲ, ಬ್ರಾಹ್ಮಿಯಲ್ಲಿದೆ. ಸಂಸ್ಕೃತದಲ್ಲಿ ಅರ್ಥ ಮಾಡಿದರೆ ಅಪಾರ್ಥವಾಗುವುದು ನಿಶ್ಚಿತ ಎಂಬುದಕ್ಕೆ ಈ ಸೂಕ್ತ ಒಂದು ಉದಾಹರಣೆ. ಯಮ-ಯಮೀ ಅಣ್ಣ-ತಂಗಿ, ಅವರ ಕಾಮಸಲ್ಲಾಪ, ವಿವಾಹ ಆಗುತ್ತದೆ ಎಂದಲ್ಲ ಮನ ಬಂದಂತೆ ವ್ಯಾಖ್ಯಾನಿಸಿದ್ದಾರೆ. ಸಂಸ್ಕೃತ ಒಂದು ಉತ್ಕೃಷ್ಟ ಭಾಷೆ, ಅದನ್ನು ಕಲಿತು ಬಳಸುವುದು ಒಳಿತು. ಆದರೆ ವೇದಗಳನ್ನು ಸಂಸ್ಕೃತದಲ್ಲಿ ಅರ್ಥೈಸಬೇಡಿ. ಕೆಲವರು ಯಮ-ಯಮೀ ಸಂವಾದ ಎನ್ನುತ್ತಾರೆ, ಆದರೆ ವೇದದಲ್ಲಿ ಅದನ್ನು ಸಂವಾದ ಎಂದು ಹೇಳಿಯೇ ಇಲ್ಲ.
ಋಗ್ವೇದದ ಈ ವಿಚಾರದ ಅಂಶಗಳನ್ನೇ ಇಟ್ಟುಕೊಂಡು ಅಥರ್ವದಲ್ಲಿ ಒಂದಿಷ್ಟು ಸಂಕಲನ ಮಾಡಿದರು. ಋಗ್ವೇದದಲ್ಲಿ ಇಲ್ಲದ ವಿಚಾರವು ಇನ್ನುಳಿದ ೩ ವೇದಗಳಲ್ಲಿಲ್ಲ. ಋಗ್ವೇದದಲ್ಲಿ ಇರುವ ವಿಚಾರವೇ ಪುನಃ ಸಂಕಲನವಾದ ಭಾಗವೇ ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಹೊಸದಾಗಿ ಮತ್ತದಕ್ಕೆ ವೇದ ಎಂಬುದಿಲ್ಲ. ವಿಭಾಗಿಸಿದ ಇಷ್ಟಿಷ್ಟು ಮಂತ್ರಗಳಿಗೊಂದು ವೇದ ಎಂದು ಮಾಡಲ್ಪಟ್ಟದ್ದಲ್ಲ. ವ್ಯಾಸರು ಪುನಃ ಸಂಕಲನ ಮಾಡಿಕೊಟ್ಟಂತಹಾ ಭಾಗವನ್ನು ಮತ್ತೊಂದು ವೇದವೆಂದು ಹೆಸರಿಸಿ ಅದನ್ನು ಉಪಾಸನೆ ಮಾಡಿಕೊಂಡು ಬನ್ನಿ ಎಂದರು. ನಮ್ಮಲ್ಲಿ ಋಷ-ಛಂದಸ್ಸಿನ ಬಗ್ಗೆ ಬೇರೆ ಬೇರೆ ಕಲ್ಪನೆಗಳಿದೆ. ಅದರ ಬಗ್ಗೆ ನೀವು ಮೊದಲು ಸ್ಪಷ್ಟ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೈಜ ಕಲ್ಪನೆ ಬರುವುದಿಲ್ಲ. ಇಲ್ಲಿ ಒಂದು ಮಂತ್ರಕ್ಕೆ ಯಮ ಋಷಿ, ಮತ್ತೊಂದು ಮಂತ್ರಕ್ಕೆ ಯಮಿ ಋಷಿ. ಹಾಗೇ ಒಂದು ಮಂತ್ರಕ್ಕೆ ಯಮ ದೇವ…

ಋಗ್ವೇದದ ವಸಿಷ್ಠ ಮಂಡಲದಲ್ಲೊಂದು ಗಣಿತಸೂತ್ರ - ಭಾಗ ೨

||  ಶ್ರೀಗುರುಭ್ಯೋನಮಃ ||
ಋ.ಮಂ.7 ಸೂ.15 ಮಂ.2ಯಃ ಪಂಚ ಚರ್ಷಣೀರಭಿ ನಿಷಸಾದ ದಮೇದಮೇ | ಕವಿರ್ಗೃಹಪತಿರ್ಯುವಾ ||
ವಸಿಷ್ಠರು ಈ ದೇಶದ ಒಬ್ಬ ನಿಃಸ್ಪೃಹ ಆದರ್ಶ ಗೃಹಸ್ಥ. ಹಾಗೇ ಕರ್ಮಠ ಬ್ರಾಹ್ಮಣ. ಹಾಗಾಗಿ ಎಲ್ಲಾ ಗೃಹಸ್ಥರಲ್ಲಿ ಅವರು ಪೂಜನೀಯರು. ವಿವಾಹವಾಗುವ ಪ್ರತಿಯೊಬ್ಬರೂಖಂಡಿತವಾಗಿ ಅವರ ದರ್ಶನ, ಸೇವೆ, ಪೂಜೆ ಮಾಡಲೇಬೇಕಾದ ಆರ್ಹ ವ್ಯಕ್ತಿ. ಅವರ ಮಾತಿನಂತೆಯೇ ಈ ಮೇಲಿನ ವಿಚಾರ ವಿಮರ್ಶೆ ಮಾಡುವುದಿದ್ದರೆ ಈ ಪಂಚವೆಂಬುದು ಮಾನವಜನ್ಮದ ಅವಿಭಾಜ್ಯ ಅಂಗ. ಅದು ಪಂಚಭೂತಾತ್ಮಕ ಸತ್ಯ. ಅದನ್ನರ್ಥ ಮಾಡಿಕೊಂಡಲ್ಲಿ ಎಲ್ಲವೂ ನಿರಾಳ, ಸುಖಮಯ, ಸುಲಭವೆಂದಿದ್ದಾರೆ. ಈ ಪಂಚಾಂಗ ಸೂತ್ರವನ್ನೇ ಇಲ್ಲಿ ಹೇಳಿದ್ದಾರೆ ಗಮನಿಸಿ.
ಬುದ್ಧಿವಂತನಾದವನಿದ ಪೇಳುಬುದ್ಧಿಯಾ ಗಣಿತವಿದು ಕೇಳುಶುದ್ಧಿಯೊಳು ರೂಢಿಸಿದೆ ಸಂಖ್ಯೆ ಅದನರಿತು ನೀನೂ ||ಬದ್ಧನಾಗೈ ಮಾನವ ಧರ್ಮಕೆಬುದ್ಧಿಯೊಳಾಲೋಚಿಸುತ ನಡೆತಿದ್ದಿಕೊಳ್ಳೈ ನಡೆಯನು ಈ ಪಂಚ ಬಂಧನವೂ || 1 ||
ಪಂಚದೊಳಗೆಲ್ಲ ಜಗವಿದೆಸಂಚರಿಸುವಾ ಪ್ರಾಣ ಪಂಚಕಹೊಂಚುವಾ ಅನ್ನ ಪಂಚಕ ಮಿಂಚುವಾ ನಿನ್ನಾನಂದ ||ಪಂಚಕ ಮುಂಬನ್ನ ಋಣವೇಪಂಚಕದೊಳಗ್ನಿಯಾಗುತಲಿಪಂಚ ಪಂಚವಾಗಿ ವಿಭಜಿಸಿದೆ ನೀನರಿಯೋ || 2 ||
ಪಂಚಭೂತದ ಸಂಘಟನೆಹೊಂಚಿದೆ ಈ ದೇಹ ವಾಯು