Skip to main content

Posts

Showing posts from August, 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೫

ಭವನವಾಸಿಗಳಾದ ದೇವನಿವಾಸ, ಅವರಭೇದ, ಚಿಹ್ನೆ ಇತ್ಯಾದಿಗಳನುಸವಿಸ್ತಾರವಾಗಿ ಈ ಕಾವ್ಯದಲ್ಲಿ ಕೇಳಿರಿ ಎಂಬುದಾಗಿ ೧೫ನೇ ಅಧ್ಯಾಯವು ಪ್ರಾರಂಭವಾಗುತ್ತದೆ. ತಮ್ಮ ತಪಸ್ಸಿನ ಫಲದಿಂದ ಲಾಭಹೊಂದಿ ಭವ್ಯಭವನವಾಸಿಗಳಾಗಿ ಸುಖಿಸುವ ಭವ್ಯಜನರ ವೈಭವವು ಈ ಭೂವಲಯದೊಳಗಿಹುದೆಂದು ತಿಳಿಸುತ್ತಾನೆ. ನಿರ್ಮಲವಾದ ತಪಸ್ಸಿನಿಂದ ಹಿಮ್ಮೆಟ್ಟಿದ ಜೀವರು ಹೆಮ್ಮೆಯ ಸಂಸಾರ ಸುಖವು ಒಮ್ಮೆಗೇ ಬರಬೇಕೆಂದಾಶಿಸಿ ನಿಧಾನವಾಗಿ ಈ ಭವನವಲಯವನ್ನು ಆತುಕೊಂಡಿದ್ದಾರೆ ಎಂದು ತಿಳಿಸತ್ತಾನೆ. ಕಾಮದಾಟಕೆ ಮನಸೋತು ಜಿನತಪವನು ಮಾರಿ ಬಿಟ್ಟು ಕೊನೆಗೆಬಂದಿಲ್ಲಿ ದೇವಿಯರ ಸೌಖ್ಯದೊಳಿದ್ದನ ಜಿನಭಕ್ತ ಕಾವ್ಯವಿದು ಎಂದು ಹೇಳಿದ್ದಾನೆ. ಮೋಹಪರವಶರಾದ ಈ ದೇವತಾಸ್ವರೂಪಿಗಳು ಮಡದಿಯೊಂದಿಗಿನ ರಸಿಕತೆಯನ್ನು ರಸವತ್ತಾಗಿ ವರ್ಣಿಸಿದ್ದಾನೆ. ಮೋಹಪರವಶರಾದ ಗಂಡುಹೆಣ್ಣುಗಳು ಪ್ರಣಯಭಾವದಿ೦ದ ಒಂದಾದಾಗ, ಅವರ ಮಾನಸಿಕ ಭಾವನೆಯ ಪ್ರತೀಕವಾಗಿನಡೆಯುವ ದೈಹಿಕ ಚಟುವಟಿಕೆಗಳನ್ನು ಬಹಳ ವಿವರವಾಗಿ; ವಿಸ್ತಾರವಾಗಿ; ಅತಿಸೂಕ್ಷ್ಮವಾಗಿ; ನವಿರಾಗಿ, ನಿರೂಪಿಸಿರುವುದನ್ನು ನಾವು ಕಾವ್ಯದಲ್ಲಿ ಕಾಣಬಹುದು. ಅವರ ಪ್ರೇಮದ ಕ್ರೀಡೆಗಳನ್ನು ನೆಲಕ್ರೀಡೆಯೆಂದು ಸೂಚಿಸಿದ್ದಾನೆ! ಅಲ್ಲಿನ ಶಯ್ಯಾಗೃಹಗಳ ವೈಭವವನ್ನು ವಿಸ್ತಾರವಾಗಿ ವರ್ಣಿಸಿದ್ದಾನೆ.

ವಿದ್ಯುತ್ಎಂಬದು 'ಎಲೆಕ್ಟ್ರಿಕ್' ಎಂಬ ಆಂಗ್ಲಾಶಬ್ದದ ಸಮಾನಾರ್ಥಕಪದ. ಇದು ಆಧುನಿಕ ವಿಜ್ಞಾನದ ಬೆಳವಾಣಿಗೆಯಾದ ನಂತರ ಎರಕಹೊಯ್ಯಲಾದ ಪದವೆಂದು ಎಲ್ಲರೂ ಭಾವಿಸುವುದು ಸಹ…

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೪

'ಳು' ಕಾರವು ಈ ಕಾವ್ಯದಲ್ಲಿ ತೀರ್ಥಂಕರನಿದ್ದಂತೆ. ಇದು ಹ್ರಸ್ವ ಸ್ವರವಲ್ಲ. ಅನಂತಗಣನೆಯ ಸುಸ್ವರ. ಸಿರಿಭೂವಲಯವು ಈ ಅತಿಶಯವಾದ ಸ್ವರದ ಅಂಗ ಎಂಬ ವಿವರಣೆಯೊಂದಿಗೆ ೧೪ನೇ ಅಧ್ಯಾಯವು ಪ್ರಾರಂಭವಾಗಿದೆ. ನಮಿ; ನೇಮಿ; ಪಾರ್ಶ್ವನಾಥ ಈ ಮೂರೂ ಜಿನರತ್ನತ್ರಯರೆಂದು ಹೇಳಿ, ಇವರು ತಪಗೈದ ವೃಕ್ಷದ ಹೆಸರು ಸೂಚಿಸಿ, ಭೂವಲಕ್ಕೆ ನಮನ ಸಲ್ಲಿಸಿದ್ದಾನೆ. ವರ್ಧಮಾನ ಜಿನೇಂದ್ರನ ವಾಣಿಯನ್ನು ಗೌತಮ ಗಣಧರನು ಹನ್ನೆರಡು ಅಂಗಗಳಾಗಿ ನಿರೂಪಿಸಿರುವುದು ಸಿರಿಭೂವಲಯಕ್ಕೆ ಆಧಾರವೆಂದೂ, ಗೌತಮನನಂತರ ಮುಂದೆ ಶ್ರುತಕೇವಲಿಗಳು ಇದನ್ನು ಹದಿನಾಲ್ಕು ಪೂರ್ವೆಗಳಾಗಿ ಕಟ್ಟಿರಿಸಿದರೆಂದೂ, ಅದರೊಳಗೆ ರಮಣೀಯವಾದ ಪ್ರಾಣಾವಾಯ ಪೂರ್ವೆಯಲ್ಲಿ ಹದಿಮೂರು ಕೋಟಿ ಕ್ರಮವಾದ ಸಿದ್ಧಾಂತದ ಲೆಕ್ಕದಲ್ಲಿ ಶ್ರಮಹಾರಿಯಾಯುರ್ವೇದವಿದೆಯೆಂದೂ ಸೂಚಿಸಿದ್ದಾನೆ. ಮಧ್ಯಮಪದದಿಂದ ಗುಣಿಸಿದ ಅಂಕಿಗಳ ವಿವರನೀಡಿದ್ದಾನೆ. ಪಾದರಸವನ್ನು ಪುಟವಿಟ್ಟು ಭಸ್ಮಮಾಡುವುದನ್ನು ಸೂಚಿಸಿ; ಕುಸುಮಾಯುರ್ವೇದದ ಮಹಿಮೆಯನ್ನುಸಾರುವ ಅಸದೃಷಕಾವ್ಯ ಎಂದು ಭೂವಲಯವನ್ನು ಪ್ರಶಂಸಿಸಿದ್ದಾನೆ. ಪುಷ್ಪಾಯರ್ವೇದ ಕ್ರಮದಿಂದ ಸಾಮಾನ್ಯಜನರಿಗೆ ದೊರೆಯುವ ಮಹತ್ತರವಾದ ಸೌಲಭ್ಯಗಳನ್ನು ವಿವರಿಸಿದ್ದಾನೆ. ಎಲ್ಲರೋಗಗಳಿಗೂ ರಾಮಬಾಣದಂಥ ಔಷಧಕ್ರಮವಿರುವುದನ್ನು ನಿರೂಪಿಸಿದ್ದಾನೆ.
  ಎಂಟುರೀತಿಯ ಔಷಧಗಳ ಕ್ರಮವಿರುವುದನ್ನು ವಿವರಿಸಿದ್ದಾನೆ.ಇದುಆಯುರ್ವೇದದಅಷ್ಟಾಂಗ ಹೃದಯದ ವಿಷಯವಿರಬಹುದು.ಜಲೌಷಧಿ; ಮಲೌಷಧಿ ಇತ್ಯಾದಿಗಳನ್ನು ವಿವರ…