Skip to main content

Posts

Showing posts from March, 2016

ನಮ್ಮ ಋಷೀ ಪರಂಪರೆ - ಶತಾನಂದ - ೩

ಹಿಂದಿನ ಲೇಖನದಲ್ಲಿ ತಿಳಿಸಿದಂತೆ ವಿಚಿತ್ರರೂಪವನ್ನು ಹೊಂದಿದ್ದ ವಿಶೇಷ ಆಚ್ಛಾದನೆ ರೂಪದಲ್ಲಿ ಚರ್ಮಧಾರಿಯಾದ ಶತಾನಂದ ಮೂರನೇ ವರ್ಷದಲ್ಲಿ ಉಪನೀತಾದಿ ಸಂಸ್ಕಾರ ಪಡೆದು ತಂದೆಯ ಅನುಮತಿಯೊಂದಿಗೆ ತಪಸ್ಸಿಗಾಗಿ ಮಂದರ ಪರ್ವತ ಸೇರುತ್ತಾನೆ. ಮಂದರ ಪರ್ವತದ ಗುಹೆಯಲ್ಲಿ ಪ್ರಣವೋಪಾಸನೆ ಮಾಡುತ್ತಾ ಹತ್ತು ಸಾವಿರ ವರ್ಷಕಾಲ ನಿರಂತರ ಚಿಂತನೆಯಲ್ಲಿ ತೊಡಗುತ್ತಾನೆ. ಹೀಗಿರುತ್ತಾ ಒಂದು ದಿನ ಸಮಾಧಿಯಿಂದ ಎಚ್ಚೆತ್ತು ಹೊರಬರಲಾಗಿ ತಾನು ತಪಸ್ಸನ್ನಾಚರಿಸುತ್ತಿದ್ದ ಗುಹೆಯ ಹೊರಭಾಗದಲ್ಲಿ ಒಂದು ವಿಶಾಲವಾದ ಕೆರೆಯನ್ನೂ ಹಾಗೂ ಅದರ ದಡದಲ್ಲಿ ಕುಳಿತಿದ್ದ ಒಂದು ಬಕಪಕ್ಷಿಯನ್ನೂ ನೋಡುತ್ತಾನೆ. ಆಶ್ಚರ್ಯಭರಿತನಾಗಿ ಸುತ್ತೆಲ್ಲಾ ಪರೀಕ್ಷಿಸುತ್ತಾನೆ. ಎಲ್ಲಿಯೂ ಜನರ ಸುಳಿವೇ ಇಲ್ಲ. ಈ ಬಕಪಕ್ಷಿ ಹೊರತಾದ ಇನ್ನೊಂದು ಜೀವಿಯ ದರ್ಶನವಿಲ್ಲ. ಕೆರೆಯಲ್ಲಿ ಕೂಡ ಮೀನುಗಳ ಸುಳಿವಿಲ್ಲ.
ಹಾಗಿದ್ದರೆ ಈ ಬಕಪಕ್ಷಿಗೆ ಇಲ್ಲೇನು ಕೆಲಸ? ನಾನು ಗುಹಾ ಪ್ರವೇಶ ಮಾಡುವಾಗ ಇಲ್ಲಿ ಕೆರೆ ಇರಲಿಲ್ಲ. ನಂತರ ಯಾರು ನಿರ್ಮಾಣ ಮಾಡಿದರು? ಏಕೆ ನಿರ್ಮಾಣ ಮಾಡಿದರು? ಈ ಬಕನಾರು? ಎಂದು ಚಿಂತಿಸುತ್ತಾ ಕೆರೆಯ ಸಮೀಪಕ್ಕೆ ನೀರಿನಲ್ಲಿ ಇಳಿದು ಕೈಕಾಲು ತೊಳೆಯ ಬೇಕೆಂದುಕೊಂಡನು. ಆಗ ಆ ಬಕಪಕ್ಷಿ “ಎಲೈ ಮಾನವನೆ! ತಡೆ, ನೀರಿಗಿಳಿಯಬೇಡ. ನೀನಾರು? ನಿನ್ನ ಹೆಸರೇನು? ಇಲ್ಲಿಗೇಕೆ ಬಂದೆ? ಹೇಳು ಮತ್ತು ನಾನು ಕೇಳುವ ಏಳು ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ನೀನು ನೀರನ್ನು ಬಳಸಬಹುದು” ಎಂದಿತು.
ಆಶ್ಚರ್ಯಚಕಿತನಾ…