Skip to main content

Posts

Showing posts from April, 2016

ಜ್ಯೋತಿರಾಯುರ್ವೇದ - ೬ : ಮಾನಸಿಕ ಜನ್ಯ ಸಮಸ್ಯೆಗಳು

ಇದು ಅತಿ ವಿಸ್ತಾರವಾದ ವಿಚಾರಗಳನ್ನು ಒಳಗೊಂಡಿದೆ. ಇಲ್ಲಿ ಮುಖ್ಯವಾಗಿ ವ್ಯಕ್ತಿಯ ಗುಣ, ಕರ್ಮ (ಉದ್ಯೋಗ), ಜ್ಞಾನ, ಶಕ್ತತೆ, ಧನ, ಆರೋಗ್ಯ ಇತ್ಯಾದಿ ಪರಿಣಾಮಗಳನ್ನು ಗುರುತಿಸಬಹುದು. ಇದನ್ನು ಹೆಚ್ಚಾಗಿ ನಕ್ಷತ್ರಾಧಾರಿತ ಸೂತ್ರದಂತೆ ಗುರುತಿಸಲಾಗುತ್ತದೆ.
ಚಂದ್ರನಿಗೂ ಮನಸ್ಸಿಗೂ ನೇರ ಸಂಪರ್ಕವಿರುತ್ತದೆ. ಹಾಗಾಗಿ ಜನ್ಮಕಾಲದ ಚಂದ್ರಬಲ, ಜನ್ಮನಕ್ಷತ್ರಕಾಲ; ಇವುಗಳ ಮುಖೇನ ಇದನ್ನು ಗುರುತಿಸಬೇಕು. ಪ್ರತಿಯೊಬ್ಬ ಮನುಷ್ಯನ ಜೀವನ ಯಶಸ್ಸು ಅವನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಶೇ ೫೦% ಭಾಗ ಆಗುಹೋಗುಗಳು ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಈ ಕಾಲದಲ್ಲಿ ಮಾನಸಿಕ ದೃಢತೆ ಸಿಗದೆ ತೊಳಲಾಡುವ ಯುವಪೀಳಿಗೆಗೆ ಮುಖ್ಯವಾಗಿ ಮಾನಸಿಕ ದೃಢತೆ (will power) ತುಂಬುವ ಕೆಲಸವನ್ನು ಪ್ರತೀ ವೈಧ್ಯನೂ, ಜ್ಯೋತಿಷಿಯೂ ಮಾಡಬೇಕಾದ ಅನಿವಾರ್ಯತೆ ಇದೆ.
        ಮಾನಸಿಕ ಹಿಂಜರಿತ (Inferiority) ಮತ್ತು ಮಾನಸಿಕ ಹಿರಿತನೋದ್ವೇಗ (Superiority) ಇವು ಸಹಜತೆಯನ್ನು ಮೀರಿ ಸಮಾಜವನ್ನು ನಾಶ ಮಾಡುತ್ತಿದೆ. ಹಿರಿತನೋದ್ವೇಗವು ತಾನು ಹೆಚ್ಚು ಎಂಬ ಅಹಂಕಾರಜನ್ಯ ಮಾನಸಿಕ ಸಮಸ್ಯೆ. ಇದರಿಂದಾಗಿ ಸ್ವಸಂಮೋಹಿನಿಯಂತಹಾ ದೈವಾವೇಶ, ಸಂನ್ಯಾಸ, ಸಾಧಕ, ಜ್ಞಾನಿ ಇತ್ಯಾದಿ ಸೋಗಿನ ಜೀವನಕ್ಕೆ ಎಳೆಯಬಹುದು. ಅಥವಾ ಕೊಲೆಗಡುಕತನ, ರೌಡಿ, ಠಕ್ಕತನ, ಪ್ರಾಕೃತಿಕ ನಾಶ, ಇತ್ಯಾದಿ ಕ್ರೂರ ಮನೋಭಾವನೆ ಬೆಳೆಯಬಹುದು. ಆದರೆ ಅವರು ಹೋದ ಮಾರ್ಗದಲ್ಲಿ ಸೋತಲ್ಲಿ ಅವರು ಹುಚ…

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೨೦ (ಭಾಗ ೨)

ಈ ಅಧ್ಯಾಯದಲ್ಲಿ ಹದಿನೆಂಟು ಶ್ರೇಣಿಗಳಲ್ಲಿ ಅಂತರ್ಸಾಹಿತ್ಯವು ದೊರೆಯುವುದನ್ನು ಸೂಚಿಸಿದ್ದಾನೆ. ಕೃಷ್ಣನು ನೇಮಿ ತೀರ್ಥಂಕರನ ಶಿಷ್ಯನಾದಕಾರಣದಿಂದ 'ನೇಮಿಯತಮ್ಮ ಕಾಮ'ಎಂದು ಕೃಷ್ಣನನ್ನು ಸೂಚಿಸಿದ್ದಾನೆ. ಕೃಷ್ಣನು ಮಹಾಭಾರತಯುದ್ಧದಲ್ಲಿ ಹಿಂಸೆಗೆ ಸಾಕ್ಷಿಯಾದರೂ, ಆಗಮದೊಳಗೆಲ್ಲ ಜನರಿಗೆ ಮನದೊಳಗೇ ಅಹಿಂಸೆಯನ್ನು ಬೋಧಿಸಿ, ಶಮ; ದಮ; ಇಂದ್ರಿಯ ನಿಗ್ರಹ; ವಿಜಯಾದಿಗಳನ್ನು ನೀಡಿ, ದಾರಿತಪ್ಪಿದವರನ್ನು ಹಿಂಬಾಲಿಸಿ, ಅವರನ್ನು ಬದ್ಧಿಯ ವಶಕ್ಕೆ ನೀಡಿದ ಯೋಗೀಶ್ವರನೆಂದು ಸೂಚಿಸಿದ್ದಾನೆ. ತನ್ನ ಕಾವ್ಯದಿಂದ ಹೊಸಮಾನವರ ಸೃಷ್ಟಿಗೆ ಕಾರಣವಾಯಿತೆಂದು ಹೇಳಿರುವ ಕುಮುದೇಂದುವು ದಿವ್ಯ ಪದ್ಧತಿಗ್ರಂಥಗಳ ಸಾರ ಸರ್ವಸ್ವವನ್ನೂ ಮೂರರಿಂದ ಗುಣಿಸುತ್ತ ತಿಳಿದುಕೊಂಡು ನವಮಾಂಕ ಪದ್ಧತಿಯಲ್ಲಿ, ರಸಸಿದ್ಧಿಪ್ರಕ್ರಿಯೆ, ದಾಂಪತ್ಯ ವಿಜ್ಞಾನ, ಯಶಸ್ಸು, ಆಯಸ್ಸಿನ ವೃದ್ಧಿ ಇತ್ಯಾದಿ ಸಕಲ ವಿಚಾರಗಳನ್ನೂ ಸಂಯೋಗಗೊಳಿಸಿ, ಕಾವ್ಯರಚನೆ ಮಾಡಿರುವುದಾಗಿ ತಿಳಿಸಿದ್ದಾನೆ. ವೇದಮಂತ್ರಗಳಲ್ಲಿ ಇರುವುದು, ಮಧ್ಯಮ ಸಂಖ್ಯಾತ ಬ್ರಾಹ್ಮಣಗಳಲ್ಲಿರುವುದು, ಬ್ರಾಹ್ಮಿ-ಸೌಂದರಿಯರ ಅಂಕಾಕ್ಷರಗಳ ಧವಲಗಳಲ್ಲಿರುವುದು ಎಲ್ಲವೂ ಒಂದೇ ಎಂದು ಸ್ಪಷ್ಟಪಡಿಸಿದ್ದಾನೆ. ವ್ಯಾಸ ಪ್ರಣೀತವಾದ ಜಯಕಾವ್ಯದೊಂದಿಗೆ ಋಗ್ಮಂತ್ರಗಳೂ ಈ ಕಾವ್ಯದಲ್ಲಿ ಅಡಕವಾಗಿವೆಯೆಂದು ಸೂಚಿಸಿದ್ದಾನೆ.
ಸಿವಪಾರ್ವತೀಶನ ಗಣಿತದ ಶ್ರೀಕಂಠದನಿಯ ತಾಳೆಯೋಲೆಗಳ ಸುವಿಶಾಲ

ಜ್ಯೋತಿರಾಯುರ್ವೇದ: ೩. ವಾತಾವರಣ ಜನ್ಯ, ೪. ಪರಿಸರ ಜನ್ಯ, ೫. ದೈಹಿಕ ಅಶಕ್ತತೆ

ಹಿಂದಿನ ಲೇಖನದಲ್ಲಿ ಆಹಾರ ಜನ್ಯ ವಿಚಾರ ಸ್ಥೂಲವಾಗಿ ತಿಳಿಸಲಾಗಿದೆ. ಅದಕ್ಕೆ ಪೂರಕವಾಗಿ ಕೆಳಕಂಡ ಎರಡು ವಿಸ್ತೃತ ಲೇಖನಗಳನ್ನೂ ನೀಡಲಾಗಿತ್ತು: ೧. ಸುಗಮ ಜೀವನ - ಸರಳ ಆಹಾರ : ಭಾಗ ೧ ೨. ಸುಗಮ ಜೀವನ - ಸರಳ ಆಹಾರ : ಭಾಗ ೨


ಮೂರನೇಯದಾದ ವಾತಾವರಣ ಜನ್ಯವನ್ನು ಜ್ಯೋತಿರಾಯುರ್ವೇದ ರೀತ್ಯಾ ಈ ರೀತಿ ಗುರುತಿಸಬಹುದು. ಮುಖ್ಯವಾಗಿ ಋತುಮಾನ ವ್ಯತ್ಯಾಸ, ಮಳೆ, ಚಳಿ, ಸೆಕೆ ಕಾಲ ವ್ಯತ್ಯಾಸ, ಅದಕ್ಕೆ ಹೊಂದಿಕೊಂಡಂತೆ ಪ್ರಾದೇಶಿಕವಾಗಿ ಪೂರ್ವೋದಾಹರಣೆಯಂತೆ ಬರತಕ್ಕ ಖಾಯಿಲೆಗಳು ಮತ್ತು ಅದರ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು.
ಉದಾ:- ಮಲೆನಾಡು ಪ್ರಾಂತ್ಯ ಕೊಪ್ಪ. ಮಳೆಗಾಲ ಆರಂಭವಾದಾಗ ಸಹಜವಾಗಿ ಮಲೇರಿಯಾ ಜ್ವರದ ಕಾಟ ಸಹಜ. ಆ ವರ್ಷ ಆಗತಕ್ಕ ಮಳೆಯನ್ನು ಹೊಂದಿ ವಾತಾವರಣ ಅಧ್ಯಯನದಿಂದ ಖಾಯಿಲೆಯ ತೀವ್ರತೆಯನ್ನು ತಿಳಿದು ವೈಧ್ಯನು ವ್ಯವಹರಿಸಬೇಕಾಗುತ್ತದೆ. ಆದರೆ ಅದೇ ಬಯಲು ಸೀಮೆಯ ಕಡೆ ಈ ಸಮಸ್ಯೆ ಇರುವುದಿಲ್ಲ. ಋತುಮಾನ, ಮಳೆ, ಬೆಳೆ, ಪ್ರದೇಶ, ವಯಸ್ಸು (ರೋಗಿಯದ್ದು), ಲಿಂಗ, ಆಹಾರ ಪದ್ಧತಿ, ಇವೆಲ್ಲದರ ಸ್ಪಷ್ಟ ಪರಿಚಯ ವೈಧ್ಯರಿಗೆ ಇರಬೇಕಾಗುತ್ತದೆ. ಆಗ ಮಾತ್ರ ರೋಗ ಗುರುತಿಸಲು ಸಾಧ್ಯ.
ಸಾಗರ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ಒಂದು ದಿನ ಸಂಜೆ ೭ ಗಂಟೆ ಹೊತ್ತಿಗೆ ಹಳ್ಳಿಯ ಕೆಲವರು ಒಮ್ಮೆಗೇ ಚಿಕಿತ್ಸಾಲಯಕ್ಕೆ ಬಂದರು. ಪ್ರತಿಯೊಬ್ಬಾರೂ ಗಂಭೀರ ಸ್ಥಿತಿಯಲ್ಲಿಯೇ ಇದ್ದರು. ಅವರನ್ನು ಕರೆತಂದವರು ಏನಾಗಿದೆಯೆಂದು ಗೊತ್ತಿಲ್ಲ ಡಾಕ್ಟರೇ! ೪ ಗಂಟೆ ಹೊತ್ತಿಗೆ ವಾ…

ನಮ್ಮ ಋಷೀ ಪರಂಪರೆ - ಶತಾನಂದ - ೪

ಅಂದು ರಾಜನಿಂದ ಹರಸಲ್ಪಟ್ಟು ಶುಭಾಶಿಷವನ್ನು ಪಡೆದು ಶತಾನಂದನು ಮಂದಾರ ಪರ್ವತ ಪ್ರದೇಶವನ್ನೇ ತನ್ನ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ತನ್ನಂತಯೇ ಸಮಾನಾಸಕ್ತಿ ಗುಣಕರ್ಮಯುಕ್ತರಾದವರನ್ನು ಕೂಡಿಕೊಂಡು ಅಲ್ಲಿ ವೇದಾಧ್ಯಯನ, ಪ್ರಯೋಗ ಪಾಠಶಾಲೆಯನ್ನು ಆರಂಭಿಸಿದ. ಹೊಸ ಹೊಸ ಸಂಶೋಧನೆಗಳನ್ನು ಮಾಡಲಾರಂಭಿಸಿದ. ಸುತ್ತಲಿನ ರಾಜ ಮಹಾರಾಜರೆಲ್ಲ ಆರ್ಥಿಕ, ಸಂಬಾರ, ವಸನಾದಿಗಳ ಸಹಾಯವನ್ನಿತ್ತು ಸೌಲಭ್ಯ ಕಲ್ಪಿಸಿಕೊಟ್ಟರು. ರಕ್ಷಣೆಯನ್ನೂ ಕೊಟ್ಟರು. ಕೆಲ ವರ್ಷಗಳಲ್ಲೇ ಶತಾನಂದರ ಗುಂಪು ಲೋಕೋತ್ತರ ಕೀರ್ತಿಶಾಲಿಗಳಾದರು. ಯಾಗಯಜ್ಞಗಳ ಮುಖೇನ ಹಲವು ಮುಖದ ಲೋಕಕಲ್ಯಾಣಕರವಾದ ಸಂಶೋಧನೆಗಳನ್ನು ಮಾಡಿ ಸಮಾಜಕ್ಕೆ ಧಾರೆಯೆರೆದರು. ಇವರ ಗುಂಪು ದೊಡ್ಡದಾಗುತ್ತಾ ಹೋಯ್ತು. ಅಷ್ಟೂ ಜನರು ತಮ್ಮ ಸ್ವಂತಿಕೆ ಇಲ್ಲದೇನೇ ಕೇವಲ ಲೋಕಹಿತಕ್ಕಾಗಿಯೇ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ನಿರ್ಲಿಪ್ತರಾಗಿ ಉಳಿದರು. ಈಗಲೂ ಅವರೆಲ್ಲಾ ತಮ್ಮನ್ನು ಸಂಪೂರ್ಣ ಲೋಕಹಿತಕ್ಕೆ ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಅವರ ಕೆಲ ಸಾಧನೆಗಳನ್ನು ಲೋಕಕ್ಕೆ ಪರಿಚಯಿಸುವುದರ ಮುಖೇನ ಶತಾನಂದರ ಪರಿಚಯ ಮಾಡಿಕೊಡುತ್ತೇನೆ.
ಒಂದಾನೊಂದು ಕಾಲದಲ್ಲಿ ದೇಶವನ್ನಾಳುವ ಕ್ಷತ್ರಿಯರೆಲ್ಲಾ ನಿರ್ವೀರ್ಯರಾಗಿ ನಿರ್ಬಲರಾಗಿ ಹೋದರು. ಸಮಾಜ ರಕ್ಷಣೆ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಹೆಸರಿಗೆ ಕ್ಷತ್ರಿಯರೆನ್ನಿಸಿಕೊಂಡರೂ ಅವರಲ್ಲಿ ಶೌರ್ಯ, ವೀರ್ಯ, ಸತ್ವ, ಧರ್ಮಬುದ್ಧಿ, ತ್ಯಾಗ, ಸತ್ಯಪರಿಪಾಲನೆ, ದಯಾಪರತೆ, ಕ್ಷಮಾ…