Skip to main content

ಹೇವಿಳಂಬಿ ಸಂವತ್ಸರ

" ಅಭೂತಿರುಪಹ್ರಿಯಮಾಣಾ ಪರಾಭೂತಿರುಪಹೃತಾ "

ಅಥರ್ವ ವೇದದ ಒಂದೇ ಮಂತ್ರದಲ್ಲಿ ವೈದಿಕ ನ್ಯಾಯಶಾಸ್ತ್ರದಲ್ಲಿ ಹೇವಿಳಂಬಿ ಹಾಗೂ ವಿಳಂಬಿಗಳೆರಡನ್ನೂ ವಿವರಿಸಿದ್ದಾರೆ. ಪ್ರಕೃತಿಯು ಪ್ರತಿಯೊಂದು ಜೀವಿಗೂ ಆಹಾರ ಕೊಡುತ್ತದೆ. ಅದನ್ನೇ "ಅಂಬಿ" ಎಂದು ಹೇಳುತ್ತದೆ. ಅದೇ ಕಡೆಗೆ ಅಂಬಲಿ ಎಂದಾಯಿತು. ಅಂಬೆಯಿಂದ ಕೊಡಲ್ಪಡತಕ್ಕದ್ದು ಅಂಬಿ ಎಂದರ್ಥ. ಅಂಬೆ ಎಂದರೆ ತಾಯಿ ಅಥವಾ ಪ್ರಕೃತಿ. ಎಲ್ಲಾ ಜೀವಿಗಳಿಗೂ ಆಹಾರ ರೂಪದಲ್ಲಿ ಕೊಡತಕ್ಕಂತಹದ್ದು ಅಂಬಿ ಎಂದರ್ಥ. ಎಲ್ಲಾ ಭಾಷೆಗಳ ಮಾತೃ ಭಾಷೆಯಾದ ಬ್ರಾಹ್ಮಿಯಲ್ಲಿದ್ದ ಮೂಲಶಬ್ದವಿದು. ಅದರಿಂದ ಮೊಟ್ಟಮೊದಲಿಗೆ ಕವಲೊಡೆದು ಬಂದಂತಹಾ ಶುದ್ಧವಾದ ಪೂರ್ವ ಕನ್ನಡ ಅಥವಾ ಪ್ರಾಕೃತ ಕನ್ನಡದಲ್ಲಿ ಬಳಕೆಯಲ್ಲಿದ್ದ ಶಬ್ದವಿದು. ನಂತರ ಅದು ಸಾವಿರಾರು ಭಾಷೆಗಳಿಂದ ಸಂಸ್ಕರಿಸಲ್ಪಟ್ಟು ತಯಾರಿಸಿದ ಅತ್ಯುತ್ತಮ ರಾಷ್ಟ್ರಭಾಷಾ ಸಂಸ್ಕೃತದಲ್ಲಿಯೂ ಸೇರಿತು. ಆದರೆ ಆಧುನಿಕ ಸಂಸ್ಕೃತದಲ್ಲಿ ಅಂಬಿ ಅಥವಾ ಅಂಬಾ ಎಂದರೆ ಮಾತೆಗೆ, ಅಂಬ ಎಂದರೆ ಆಹಾರ ಧಾನ್ಯಕ್ಕೆ ಎಂದು ಸ್ವಲ್ಪ ವ್ಯತ್ಯಾಸವಾಗಿ ಅನ್ವಯಗೊಂಡಿತು.ಯಾವುದು ನಿಮಗೆ ಆಹಾರ? ಪ್ರತಿಯೊಂದು ಜೀವಿಗೂ ಒಂದೊಂದು ಆಹಾರ ಎಂದು ನಿರ್ಣಯಿಸಲ್ಪಟ್ಟಿರುತ್ತದೆ. ಅದನ್ನು ಹೊರತುಪಡಿಸಿ ಯಾವುದನ್ನಾದರೂ ನೀವು ಬಳಸುವುದಿದ್ದರೆ ತಪ್ಪು. ಉದಾ:- ಮನುಷ್ಯರಿಗೆ ಅನ್ನ ಆಹಾರ ಎಂದಿದೆ. ಅನ್ನ ಎಂದರೆ ನಾಲಿಗೆಯಿಂದ ಹೊಟ್ಟೆಗೆ ಮಾತ್ರವಲ್ಲ. ಅನ್ನಂ ಚತುರ್ವಿಧಂ ಎಂದರೆ ಕಣ್ಣು, ಕಿವಿ, ಮೂಗು, ಬಾಯಿಗಳಿಗೆ ಕ್ರಮವಾಗಿ ನೀಡಲ್ಪಡುವ ಸುದೃಶ್ಯ, ಸುಶ್ರಾವ್ಯ, ಸುಗಂಧ, ಸುಭೋಜ್ಯಗಳೇ ಅನ್ನ. ಅದನ್ನು ಹೊರತುಪಡಿಸಿ ಹುಲ್ಲು ತಿಂದರೆ ತಪ್ಪು. ಅದು ಹೇವಿಳಂಬಿ ಆಗುತ್ತದೆ. ಅಭೂತಿರುಪಹ್ರಿಯಮಾಣಾಃ ವಿಳಂಬಿ ಎಂದರೆ ನಿಮಗೆ ನಿರ್ದೇಶಿಸಿದ ಆಹಾರಗಳನ್ನೇ ನೀವು ತಿಂದರೆ ಅದು ವಿಳಂಬಿ ಎಂದಾಗುತ್ತದೆ. ಮಂತ್ರದಲ್ಲಿ ಪರಾಭೂತಿರುಪಹೃತಾ ಹೇವಿಳಂಬಿ ಎಂದರೆ ಇನ್ನೊಂದರ ಆಹಾರ ತಿನ್ನುವುದು ಹೇವಿಳಂಬಿ ಎಂದಿದೆ.

 ಉದಾ:- ಗೋವು, ಜಿಂಕೆ, ಕೋಳಿ, ಕುರಿ, ನಾಯಿ, ಹಂದಿ, ಬೆಕ್ಕು, ಹೆಗ್ಗಣ, ಇವೆಲ್ಲ ಮಾನವ ಆಹಾರವಲ್ಲ. ಅದನ್ನು ಆಹಾರವಾಗಿ ಬಳಸಿದರೆ ವಿಳಂಬಿ, ಬಳಸದಿದ್ದರೆ ಹೇವಿಳಂಬಿ.

ಪ್ರಕೃತಿಯು ಯಾವ ಆಹಾರವನ್ನು ನಿಮಗೆ ನಿರ್ದೇಶಿಸಿ ಕೊಟ್ಟಿದೆಯೋ ಅದನ್ನು ಮಾತ್ರ ತಿಂದರೆ ನೀವು ಜ್ಞಾನವನ್ನು ಹುಡುಕಿಕೊಂಡು ಎಲ್ಲೇಲ್ಲೋ ಅಲೆದಾಡಬೇಕಾಗಿಲ್ಲ. ಅನ್ನಾತ್ ಜಾಯತೇ ಬುದ್ಧಿಃ ಎಂದಿದೆ. ಅಂದರೆ ಯಾವುದು ಅನ್ನವೋ ಅದನ್ನೇ ತಿಂದರೆ ಬುದ್ಧಿ ಬೆಳೆಯುತ್ತದೆ. ಬುದ್ಧಿಯಿಂದ ಜ್ಞಾನ ವೃದ್ಧಿಯಾಗುತ್ತದೆ. ಅದೇ ನಿಮ್ಮದ್ದಲ್ಲದ ಯಾವ್ಯಾವುದೋ ಅನ್ನವನ್ನು ತಿಂದಾಗ ನಾಯಿಬುದ್ಧಿ, ಕತ್ತೆಬುದ್ಧಿ, ನರಿಬುದ್ಧಿ ಎಲ್ಲ ಬೆಳೆದುಬಿಟ್ಟು ಜ್ಞಾನ ಬರುವುದೇ ಇಲ್ಲ. ಸಮಸ್ಯೆ ಬರುವುದೇ ಅಲ್ಲಿ. ಜ್ಞಾನಾರ್ಜನೆಗೆ ಎಲ್ಲಿಯೋ ಹೋಗಬೇಕಾಗಿಲ್ಲ. ಜ್ಞಾನಾರ್ಜನೆ ಆಗಬೇಕಿದ್ದಾಗ ನಿಮ್ಮಲ್ಲಿಗೇ ಬಂದು ಬೋಧಿಸುತ್ತದೆ; ಪ್ರಕೃತಿ. ಅಷ್ಟು ವ್ಯವಸ್ಥೆ ಮಾಡಿಕೊಡುತ್ತದೆ. ನೀವು ಹುಡುಕಿಕೊಂಡು ಹೋಗುವುದೇಕೆಂದರೆ ತಿನ್ನಬಾರದ್ದೆಲ್ಲ ತಿಂದಿರುತ್ತೇವೆ. ಹಾಗಾಗಿ ಹುಡುಕಿಕೊಂಡು ಹೋಗಬೇಕಾಗುತ್ತದೆ, ಹುಡುಕಿಕೊಂಡು ಹೋದರೂ ಸಿಕ್ಕುವುದಿಲ್ಲ.

ಇದು ವೈದಿಕ ನ್ಯಾಯಶಾಸ್ತ್ರದ ಪಾಠದಲ್ಲಿ ಬರುವ ಸಂವತ್ಸರ ಸೂತ್ರ ವಿವರಣೆ. ಪ್ರತಿಯೊಂದು ಸಂವತ್ಸರ ಹೆಸರಿನಿಂದ ವೇದ ಮಂತ್ರಗಳ ಮುಖೇನ ವಿವರಣೆ ಇದೆ. ಒಂದೊಂದು ಸಂವತ್ಸರದ ಹೆಸರಿನ ನ್ಯಾಯ ಭಾಗಕ್ಕೆ ಆರಾರು ಕಥೆಗಳ ಉದಾಹರಣೆ ಇದೆ. ಒಂದೊಂದು ಕಥೆಯೂ ಆಯಾಯ ನ್ಯಾಯ ಭಾಗದಲ್ಲಿ  ತಪ್ಪುಗಳು, ಅಪರಾಧಗಳು ಹೇಗೆ ಘಟಿಸುತ್ತದೆ, ಅದಕ್ಕೆ ಪ್ರಾಯಶ್ಚಿತ್ತ ರೂಪವಾಗಿಯೇ ಋಗ್ವೇದದಲ್ಲಿ ೬೧೦ ಮಂತ್ರಗಳ ರೂಪದಲ್ಲಿ ಪವಮಾನ ಕೊಟ್ಟದ್ದು. ಅದರಲ್ಲಿ ಎಲ್ಲಾ ಪಾಪಗಳನ್ನೂ ಪರಿಹಾರ ಮಾಡಿಕೊಳ್ಳಲಿಕ್ಕೆ ಎಂದು ಪರಿಶಿಷ್ಟ ಭಾಗದಲ್ಲಿ ಹೇಳುತ್ತಾರೆ. ಆ ೬೧೦ ಮಂತ್ರಗಳ ನಿತ್ಯಾನುಷ್ಠಾನದಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯ ಎಂದು ಪ್ರಾಯಶ್ಚಿತ್ತ ವಿಧಿ ಹೇಳುತ್ತದೆ. ಅದರಲ್ಲಿ ಮೂಲತಃ ೭೨೦ ಮಂತ್ರಗಳಿತ್ತು. ಈಗ ೬೧೦ ಉಳಿದಿದೆ. ಉಳಿದ ಕೊರತೆ ನೀಗಿಸಲು ಅಸ್ಯಾ ವಾಮೀಯ ಸೂಕ್ತ ೫೩ ಮಂತ್ರಗಳು, ಋಗ್ವೇದ ೧೦-೧೧೯ರ ೧೩ ಮಂತ್ರಗಳು, ಋಗ್ವೇದ ೧೦-೧೨೬ರ ೮ ಮಂತ್ರಗಳು, ಪುರುಷಸೂಕ್ತದ ೧೬ ಮಂತ್ರಗಳು, ೨೪ ಖಿಲ ಮಂತ್ರಗಳು ಸೇರಿಸಿ ೭೨೪ ಮಾಡುವ ಪ್ರಯತ್ನ ನಡೆದಿದೆ. ಅಲ್ಲಿ ೬ x = ೩೬ x (ಹಾಗೋ ಹೀಗೋ) ೨ = ೭೨ ಶತಗುಣಿತ = ೭೨೦ ಮಂತ್ರಗಳಿತ್ತು. ಅದೇ ಸಾರ್ವತ್ರಿಕವಾಗಿ ಸಿಗಲಿ ಎಂದು ದೇವೀ ಭಾಗವತ (ಸಪ್ತಶತೀ) ಇದರಲ್ಲಿ ೭೨೦ ಶ್ಲೋಕ ರೂಪದಲ್ಲಿ ಪ್ರಕಟವಾಯಿತು. ದೇವಿ ಪುರಾಣವೂ ಪವಮಾನದ ಉದ್ದೇಶದಲ್ಲಿಯೇ ಸಂಕಲಿತವಾದದ್ದು. ನಿಮ್ಮಲ್ಲಿರತಕ್ಕಂತಹಾ ಕೆಟ್ಟ ಬುದ್ಧಿ ಎನ್ನುವುದೇ ರಾಕ್ಷಸರು. ಅದನ್ನು ನಿರಸನ ಮಾಡುವ ಕಥೆಯ ರೂಪದಲ್ಲಿ ಪುರಾಣ ಪ್ರಹಸನ ರಚಿಸಿದರು.

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, 
ಪೂರ್ವೋತ್ತರ ಮೀಮಾಂಸಕರು, 
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು 
ಇವರ ಪ್ರಾಚ್ಯ ವಿಧ್ಯಾ ಪ್ರಾಕಾರದ ವೈದಿಕ ನ್ಯಾಯಶಾಸ್ತ್ರ ಪಾಠದಿಂದ ಆಯ್ದ ಭಾಗ

Comments

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…